ವರ್ಕ್‌ಫ್ರಮ್ ಹೋಮ್ ವಂಚನೆ ವಿರುದ್ಧ ಎಸ್‌ಪಿ ಎಚ್ಚರಿಕೆ

CTD 7 SP --2---06
Published on

ಚಿತ್ರದುರ್ಗ: ತಾಂತ್ರಿಕ ಶಿಕ್ಷಣ ಪಡೆದ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿರುವ ಜಾಲದೆಡೆ ಎಚ್ಚರ ವಹಿಸುವಂತೆ ಎಸ್‌ಪಿ ಕೆ.ಪರ ಶುರಾಮ ಯುವಜನರಿಗೆ ಮನವಿ ಮಾಡಿದ್ದಾರೆ. ವರ್ಕ್‌ಫ್ರಮ್‌ಹೋಮ್ ಮೂಲಕ ಲಕ್ಷಾಂತರ ರೂ.ಸಂಪಾದಿಸ ಬಹುದೆಂಬ ಸಂದೇಶ ವನ್ನು ವಾಟ್ಸ್‌ಆ್ಯಪ್/ಟೆಲಿಗ್ರಾಮ್ ಮೂಲಕ ಸಂದೇಶಗಳನ್ನು ಕಳಿಸುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ಇಂಥ ಸಂದೇಶದಗಳಿಗೆ ಪ್ರತಿಕ್ರಿಯಿ ಸುವ ಯುವಕ-ಯುವತಿಯರ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದು ಬಳಿಕ,ಅವರೆಲ್ಲರನ್ನೂ ಒಳಗೊಂಡ ವಾಟ್ಸ್‌ಆ್ಯಪ್/ಟೆಲಿಗ್ರಾಮ್ ಗುಂಪು ರಚಿಸಿ,ಆರಂಭದಲ್ಲಿ ಒಂದಿಷ್ಟು ಹಣವನ್ನು ಆನ್‌ಲೈನ್ ವ್ಯಾಲೆಟ್‌ಗಳ ಮೂಲಕ ಕಳಿಸಿ ನಂಬಿಕೆಗಳಿಸಿಕೊಳ್ಳುವುದು. ಬಳಿಕ ನೋಂದಣಿ ಮತ್ತಿತರ ಶುಲ್ಕ,ಕಮಿಷನ್ ಎಂದೆಲ್ಲ ದೊಡ್ಡ ಮೊತ್ತದ ಹಣವನ್ನು ಕಟ್ಟಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಕಂಡು ಬಂದಿವೆ. ನಿಜವಾದ ಉದ್ಯೋಗದಾತನಿಗೆ ಪ್ರತಿಭಾವಂತ ಉದ್ಯೋಗಿಗಳು ಬೇಕಾಗಿರುತ್ತಾರೆಯೇ ಹೊರತು ನಿರುದ್ಯೋಗಿಗಳ ಹಣವಲ್ಲ, ಆದ್ದರಿಂದ ಇಂಥ ಸಂದೇಶಗಳಿಗೆ ಪ್ರತಿಕ್ರಿಯಿಸುವ ಮೊದಲು ಭೌತಿಕವಾಗಿ ನೈಜತೆಯನ್ನು ಪರಿಶೀಲಿಸಿಕೊಳ್ಳುವಂತೆ ಪರಶುರಾಮ್ ಹೇಳಿಕೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net