ವರುಣ್, ಕಾರ್ತಿಕ್, ಸುಗುಣಗೆ ಪ್ರಶಸ್ತಿ

2.npk-1
Published on

ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕಬೆಯ ಟ್ರಯಾಂಗಲ್ ಶೂಟಿಂಗ್ ಕ್ಲಬ್ ವತಿಯಿಂದ ಮೂರನೇ ವರ್ಷದ ಕೈಲ್ಪೋದ್ (ಕೈಲ್ ಮುಹೂರ್ತ) ತೆಂಗಿನ ಕಾಯಿಗೆ ಗುಂಡು ಹೊಡೆಯುವ (ಕೊಕೊನಟ್ ಶೂಟಿಂಗ್) ಸ್ಪರ್ಧೆಯನ್ನು ಮಂಗಳವಾರ ಕಕ್ಕಬೆಯ ಜಿಯಂಪಿ ಶಾಲೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಸ್ಪರ್ಧೆಗಳು ಮೂರು ವಿಭಾಗಗಳಲ್ಲಿ ನಡೆದವು. ಮೊದಲನೇ ವಿಭಾಗವಾದ 0.22 ರೈಫಲ್ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನವನ್ನು ವರುಣ್ ಬಳಪದ ಪಡೆದರು. ದ್ವಿತೀಯ ಸ್ಥಾನವನ್ನು ಕಾರ್ತಿಕ್ ಕಾರ್ಯಪ್ಪ ಪುತ್ತರಿರ, ತೃತೀಯ ಬಹುಮಾನವನ್ನು ಐಯ್ಯೇಟಿರ ಸುಗುಣ ಪಡೆದುಕೊಂಡರು.


ತೋಟದ ಕೋವಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನವನ್ನು ಅಜ್ಜೆಟೀರ ಗೌತಮ್, ಎರಡನೇ ಸ್ಥಾನವನ್ನು ಪಟ್ಟಮಾಡ ಐರಾ ಬೋಪಣ್ಣ, ಮೂರನೇ ಸ್ಥಾನವನ್ನು ಪುದಿ ಯೊಕ್ಕಡ ಪೂರ್ಣ ಪೂಣಚ್ಚ ಪಡೆದುಕೊಂಡರು.


ಏರ್‌ಗನ್ ಟಾರ್ಗೆಟ್ ವಿಭಾಗದಲ್ಲಿ ಮೊದಲನೇ ಸ್ಥಾನವನ್ನು ಕೇಚಿರ ಶಬ್ಧ್ ಬೆಳ್ಳಿಯಪ್ಪ, ಎರಡನೇ ಸ್ಥಾನವನ್ನು ಜಸ್ಟಿನ್, ಮೂರನೇ ಸ್ಥಾನವನ್ನು ಪುತ್ತರಿರ ನಂಜಪ್ಪ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net