ವರಿಷ್ಠರ ಗಮನಕ್ಕೆ ಕಾರ‌್ಯಕರ್ತರ ನೋವು

PHOTO-4---0006
Published on

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ಸಿಕ್ಕಿಲ್ಲವೆನ್ನುವ ನೋವಿದೆ ಎಂದು ಕೆಪಿಸಿಸಿ ಬಿಎಲ್‌ಎ ಸಮನ್ವಯ ಸಮಿತಿ ಅಧ್ಯಕ್ಷ ಪಿ.ವಿ.ಮೋಹನ್ ಹೇಳಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಎಲ್‌ಎ ನೇಮಕ ಪ್ರ ಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಾರ‌್ಯಕರ್ತರ ನೋವನ್ನು ವರಿಷ್ಠ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಬೂತ್‌ಮಟ್ಟದ ಏಜೆಂಟರ ಪಾತ್ರ ಪ್ರಮುಖವಾದುದು. ದೇಶ ಮತ್ತು ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲೇಬೇಕು. ರಾಜ್ಯದಲ್ಲಿ 12-15 ಕ್ಷೇತ್ರಗಳಲ್ಲಿ ಗೆಲುವಿನ ಗುರಿ ಇದೆ ಎಂದರು.
ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಮತದಾರರ ಪಟ್ಟಿ ಪರಿಶೀಲನೆ ಮುಖ್ಯವಾಗಿದೆ ಎಂದು ಹೇಳಿದರು.
ಗೀತಾನಂದಿನಿಗೌಡ, ಅಮೃತೇಶ್ವರ್, ಮುನೀರ್, ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಅನಂತ್, ಯು.ಲಕ್ಷ್ಮೀಕಾಂತ್, ಆರ್.ಪ್ರಕಾಶ್, ಮುದಸಿರ್ ನವಾಜ್, ಖಾದಿ ರಮೇಶ್, ಮುನಿರಾ ಎ.ಮಕಾಂದಾರ್, ಶಿವಲಿಂಗಪ್ಪ, ಮೋಹನ್ ಪೂಜಾರಿ, ಎಚ್.ಅಂಜಿನಪ್ಪ, ರೇಣುಕಾ ಶಿವು, ಇಂದಿರಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net