ವರಮಹಾಲಕ್ಷ್ಮಿಹಬ್ಬ: ಬೆಲೆ ಏರಿಕೆ ನಡುವೆ ಭರ್ಜರಿ ವ್ಯಾಪಾರ

ವರಮಹಾಲಕ್ಷ್ಮಿಹಬ್ಬ: ಬೆಲೆ ಏರಿಕೆ ನಡುವೆ ಭರ್ಜರಿ ವ್ಯಾಪಾರ
Published on

ಹಾಸನ: ವರಮಹಾಲಕ್ಷ್ಮಿಹಬ್ಬದ ಹಿನ್ನಲೆಯಲ್ಲಿ ಗುರುವಾರ ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ವ್ಯಾಪಾರ ಭರಾಟೆ ಜೋರಾಗಿ ನಡೆಯಿತು.

ಹಬ್ಬಕ್ಕೆ ಅಗತ್ಯವಾದ ಬಾಳೆಕಂದು, ಮಾವಿನ ಸೊಪ್ಪು, ತಾವರೆ ಹೂವು, ಹೂವುಗಳು, ಬಾಳೆಹಣ್ಣು, ತರಕಾರಿ ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದರು.

ನಗರದ ಕಟ್ಟಿನಕೆರೆ ಮಾರುಕಟ್ಟೆ ಹಾಗೂ ಮಹಾವೀರ ವೃತ್ತ ಸೇರಿದಂತೆ ನಗರದ ಪ್ರಮುಖ ಬಡಾವಣೆ ಮತ್ತು ವೃತ್ತಗಳಲ್ಲಿ ಬೆಳಿಗ್ಗೆಯಿಂದಲೇ ಮಹಿಳೆಯರು, ಯುವತಿಯರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಹಬ್ಬಕ್ಕೆ ಅಗತ್ಯವಾದ ವಸ್ತು ಗಳನ್ನು ಉತ್ಸಾಹದಿಂದ ಕೊಂಡುಕೊಳ್ಳು ತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆಯ ಸಮಯದಲ್ಲಿ ಹೆಚ್ಚಿನ ಜನರು ಆಗಮಿಸಿದ್ದರಿಂದ ಮಾರುಕಟ್ಟೆಯಲ್ಲಿ ಜನರಿಂದ ತುಂಬಿ ತುಳುಕುತ್ತಿತ್ತು.

ಶ್ರಾವಣ ಮಾಸ ಆರಂಭದಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಗರಿ ಗೆದರಲಿದೆ ಎನ್ನುವ ಮಾರಾಟಗಾರರ ಕನಸಿಗೆ ಮಳೆರಾಯ ತಣ್ಣೀರೆರಚಿದ್ದಾನೆ. ಜಿಲ್ಲೆಯಲ್ಲಿ ಮಳೆ ಇಲ್ಲದ ಪರಿಣಾಮ ತರಕಾರಿ, ಹೂ, ಹಣ್ಣುಗಳ ಬೆಳೆ ನಾಶವಾಗಿದೆ. ಕೈ ಬಂದಿರುವ ಅಲ್ಪ-ಸ್ವಲ್ಪ ಬೆಳೆ ನೀರಾವರಿ ಇರುವವರು ಬೆಳೆಯನ್ನು ಜೋಪಾನ ಮಾಡಿಕೊಂಡಿದ್ದಾರೆ.ಇರುವುದ್ದರಿಂದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ದುಬಾರಿಯಾದ ಹೂ

ಸೇವಂತಿಗೆ 70 ರೂ,

ಕಾಕಡ 80 ರೂ.,

ಮಲ್ಲಿಗೆ 150 ರಿಂದ 120ರೂ.

ಚೆಂಡು 50ರೂ.,

ಗುಲಾಬಿ (ಒಂದಕ್ಕೆ) 10 ರಿಂದ 20 ರೂ.

ಬಾಳೆ ಕಂದು ಒಂದಕ್ಕೆ 10 ರಿಂದ 20

ಮಾವಿನ ಸೊಪ್ಪು ಒಂದು ಕಟ್ಟಿಗೆ 10 ರೂ.

ತಾವರೆ ಹೂವು ಒಂದಕ್ಕೆ 20 ರಿಂದ 40 ವರೆಗೂ ಮಾರಾಟ ಮಾಡಲಾಗುತ್ತಿದೆ.

ಹಣ್ಣುಗಳು

ಸೇಬು 180,

ದಾಳಿಂಬೆ 160

ಮೌಸಿಂಬಿ 80

ದ್ರಾಕ್ಷಿ 200

ಕಿತ್ತಳೆ 120

ಬಾಳೆಹಣ್ಣು 100-120

ಸಪೋಟ 120

ಬೆಲೆ ಏರಿಕೆ ಆದ್ದರೂ ಕೂಡ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಆದರೂ, ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ ಹೂ, ಹಣ್ಣು, ಬಾಳೆಕಂದು, ತರಕಾರಿಯನ್ನು ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಿದ್ದೇನೆ

ಕಮಲಮ್ಮ

ನಗರದ ನಿವಾಸಿ

ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಗ್ರಾಹಕರು ಬಂದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ದರೆ. ಈ ಬಾರಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೂ ಗ್ರಾಹಕರು ಉತ್ಸಾಹದಿಂದ ಹೂ, ಹಣ್ಣು ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿ ಯೊಬ್ಬರು ತಿಳಿಸಿದರು.

ನಗರದ ಟ್ರಾಫಿಕ್ ಜಾಮ್

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಕೊಳ್ಳಲು ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರಿಂದ ನಗರದ ಬಹುತೇಕ ಕಡೆ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಟ್ರಾಫಿಕ್ ಸಮಸ್ಯಯನ್ನು ನಿಯಂತ್ರಿಸಲು ಪೊಲೀಸರು ಅರ ಸಹಾಸಪಟ್ಟರು. ಸವಾರರು ವಾಹನ ನಿಲುಗರಿಗೆ ಜಾಗವಿಲ್ಲದೆ ಸವಾರರು ಪಾರದಾಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net