

ವರನ ತಾಯಿ ಕುರುಡು ಎಂದು ತಿಳಿದು ವಧು ಆತ್ಮಹತ್ಯೆಗೆ ಶರಣು!
ಚಿಕ್ಕೋಡಿ:ಮದುವೇಯಾಗಬೇಕಿದ್ದ ವರನ ತಾಯಿ ಕುರುಡಿ ಎಂದು ತಿಳಿದ ವಧು ಮದುವೆಯ ಹಿಂದಿನ ದಿನ ಮಧ್ಯರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.
ಶ್ರುತಿ ಶಂಕರ್ ಬುರುಡ (ವಯಸ್ಸು 24) ಆತ್ಮಹತ್ಯೆಗೆ ಶರಣಾದ ವಧು.
ನವಲಿಹಾಳ ಗ್ರಾಮದ ಮೃತ ಶ್ರುತಿ ಜತೆಗೆ ಬೆಳಗಾವಿಯ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು.
ಮೇ 25 ರಂದು ಮದುವೆ ನಡೆಯಬೇಕಿತ್ತು. ಆದರೆ ಮೇ. 24 ರಂದು ರಾತ್ರಿ ಅರಿಶಿನ ಹಚ್ಚುವ ಕಾರ್ಯಕ್ರಮವಿತ್ತು. ಅದೇ ದಿನ ರಾತ್ರಿ ಶ್ರುತಿ ತನ್ನ ತಾಯಿಯೊಂದಿಗೆ ವರನ ತಾಯಿಯ ಆರೋಗ್ಯ ಸಮಸ್ಯೆ ಕುರಿತು ಚರ್ಚಿಸಿದ್ದಾಳೆ.ಆಗ ಶ್ರುತಿ ತಾಯಿ ಹಾಗೇನು ಇಲ್ಲ ಎಂದು ಸಮಾಧಾನ ಪಡಿಸಿದ್ದಳು.ಆದರೆ ಅದೇ ದಿನ ರಾತ್ರಿ ಮನೆಯಿಂದ ಶ್ರುತಿ ಕಾಣೆಯಾಗಿದ್ದಳು.ಮರುದಿನ ಬಾವಿಯಲ್ಲಿ ಶ್ರುತಿ ಮೃತದೇಹ ಪತ್ತೆಯಾಗಿದೆ.ವರನ ತಾಯಿ ಕುರುಡು’ ಎಂದು ತಿಳಿದಿದ್ದರಿಂದ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಾಲಕರು ದೂರು ದಾಖಲಿಸಿದ್ದಾರೆ’ ಎಂದು ಖಡಕಲಾಟ ಠಾಣೆ ಪೊಲೀಸರು ತಿಳಿಸಿದ್ದಾರೆ.ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.