

ಬೀದರ್: ನಗರದ ವರದ್ ಸೂರ್ಯಕಾಂತ ರಾಮಶೆಟ್ಟಿ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಇಂಟ್ರ್ಯಾಕ್ಟ್ ಕ್ಲಬ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಕಲಬುರಗಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಪದಗ್ರಹಣ ಮಾಡಿದರು. ವರದ್, ಗುರುನಾನಕ ಪಬ್ಲಿಕ್ ಸ್ಕೂಲ್‍ನ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ರೋಟರಿ ಜಿಲ್ಲೆ 3160 ಕರ್ನಾಟಕದ ಎಂಟು ಹಾಗೂ ಆಂಧ್ರಪ್ರದೇಶದ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿದೆ.