ವರದರಾಜಸ್ವಾಮಿ ರಥೋತ್ಸವ ಅದ್ದೂರಿ

16_01
Published on

ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ

ಹುಲಿಯೂರುದುರ್ಗ: ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಶ್ರೀ ಹೇಮಗಿರಿ ವರದರಾಜ ಸ್ವಾಮಿ ಬ್ರ್ರಹ್ಮರಥೋತ್ಸವದಲ್ಲಿ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಮಹೊತ್ಸವ ಪ್ರಯುಕ್ತ ಹೇಮಗಿರಿ ವರದರಾಜ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಐವತ್ತು ಸಾವಿರಕ್ಕೂ ಅಧಿಕ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದರು. ಜಾತ್ರೆಯಲ್ಲಿ ಭಾಗಿಯಾಗಿದ್ದ ಭಕ್ತರು ತೆಂಗಿನಕಾಯಿ, ಬಾಳೆಹಣ್ಣು, ಕಜ್ಜಾಯಾ ಹಾಗೂ ಬಗೆ ಬಗೆಯ ಹಣ್ಣುಗಳಿಂದ ಪ್ರಸಾದ ತಯಾರಿಸಿ ರಥದ ಮುಂಭಾಗದಲ್ಲಿ ಮಣೆವು ಹಾಕಿದರು. ಗೋವಿಂದ ಗೋವಿಂದ ಎನ್ನುವ ಮೂಲಕ ರಥಕ್ಕೆ ಹೂವು ಹಣ್ಣು ಬಿರುವ ಮೂಲಕ ಇಷ್ಟಾರ್ಥಗಳಿಗೆ ಪ್ರಾರ್ಥಿಸಿದರು. ರಥೋತ್ಸವದ ವೇಳೆ ವರುಣನ ಸಿಂಚನ ಸಣ್ಣ ಸಣ್ಣ ಹನಿಗಳ ಮೂಲಕ ವರುಣ ಸಿಂಚನವಾಗುತ್ತಿದ್ದಂತೆ ಭಕ್ತರು ಹರ್ಷ ವ್ಯಕ್ತಪಡಿಸಿದರು. ಭದ್ರತೆಗಾಗಿ 150ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಪಟಕಪುರಿ ಶ್ರೀ ನಂಜಾವಧೂತ ಸ್ವಾಮೀಜಿ, ಅರೆಶಂಕರ ಮಠದ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ, ಶಾಸಕ ಡಾ.ರಂಗನಾಥ್​, ಸಂಸದ ಡಾ.ಸಿ.ಎನ್​.ಮಂಜುನಾಥ್​, ಬಿಜೆಪಿ ಮುಖಂಡ ರಾಜೇಶ್​ ಗೌಡ, ಉಪ ತಹಸೀಲ್ದಾರ್​ ರುದ್ರಾಣಮ್ಮ, ಕಂದಾಯಧಿಕಾರಿ ಪುರುಷೋತ್ತಮ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net