ವರದಕ್ಷಿಣೆ ದಾಹಕ್ಕೆ 3 ತಿಂಗಳ ಗರ್ಭಿಣಿ ಬಲಿ

ವರದಕ್ಷಿಣೆ ದಾಹಕ್ಕೆ 3 ತಿಂಗಳ ಗರ್ಭಿಣಿ ಬಲಿ
Published on


ಚನ್ನರಾಯಪಟ್ಟಣ: ಕೇಳಿದಂತೆಲ್ಲ ಹಣ ತರಲಿಲ್ಲವೆಂಬ ಕಾರಣಕ್ಕೆ ಪತಿರಾಯನೊಬ್ಬ ತನ್ನ ಪತ್ನಿಯನ್ನು ತಾಲೂಕಿನ ಸಮುದ್ರವಳ್ಳಿ ಗ್ರಾಮಕ್ಕೆ ಕರೆತಂದು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪಾಲಕರು ಪಟ್ಟಣದ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.


ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ಕುಮಾರ್ ಹಾಗೂ ಸುಧಾ ದಂಪತಿಗಳ ಪುತ್ರಿ ರೋಹಿಣಿ(23) ಮೃತ ದುರ್ಧೈವಿ.


ಘಟನೆಯ ವಿವರ: ಅರಕಲಗೂಡು ತಾಲೂಕು ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನಿಗೆ ಕುಮಾರ್ ಹಾಗೂ ಸುಧಾ ದಂಪತಿಗಳು ತನ್ನ ಮಗಳು ರೋಹಿಣಿಯನ್ನು ಕಳೆದ ಮೇ.28 ರಂದು ಕೇರಾಳಪುರದ ಕಲ್ಯಾಣಮಂಟಪ ವೊಂದರಲ್ಲಿ ವಿವಾಹ ಮಾಡಿಕೊಟ್ಟಿದರು.
ಸುಮಂತ್‌ಗೆ 250 ಗ್ರಾಂ ಚಿನ್ನ ನೀಡಿದ್ದು 20 ಲಕ್ಷ ರೂ. ಹಣ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು. ತಾಯಿ ಮೀನಾಕ್ಷಿ ಜತೆ ಇದ್ದರು. ಮೊದ ಮೊದಲು ಚೆನ್ನಾಗಿಯೇ ಇದ್ದವರು 2 ತಿಂಗಳು ಕಳೆಯುತಿದ್ದಂತೆಯೇ ಸುಮಂತ್ ವರಸೆ ಬದಲಾಯಿಸಿದ್ದ.


ರೋಹಿಣಿಗೆ ಯಾವುದಾದರೂ ಕರೆ ಬಂದರೂ ಅನುಮಾನ ಪಟ್ಟು ಬೈದು ಹೊಡೆಯುತಿದ್ದು ಅದನ್ನೇ ಗುರಿ ಮಾಡಿಕೊಂಡು ಹೆಚ್ಚು ಹಣ ತರುವಂತೆ ಕಿರುಕುಳ ನೀಡುತಿದ್ದ. ಜತೆಗೆ ಬ್ಯಾಂಕ್ ಉದ್ಯೋಗಿ ಎಂದು ಸುಳ್ಳು ಹೇಳಿದ್ದ ಎಂಬುದಾಗಿ ರೋಹಿಣಿಯ ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಆತನ ಅಕ್ಕ ಸುಶ್ಮಿತಾ ಹಾಗೂ ಭಾವ ಪ್ರಮೋದ್ ಸಹ ರೋಹಿಣಿಯನ್ನು ಹೀಯಾಳಿಸಿ ಚುಚ್ಚು ಮಾತನಾಡುತಿದ್ದರು ಎನ್ನಲಾಗಿದೆ. ಇದೆಲ್ಲದರಿಂದ ಬೇಸತ್ತಿದ್ದ ರೋಹಿಣಿ ತನ್ನ ಸಹೋದರನಿಗೆ ಏನೋ ಮಾತನಾಡಬೇಕೆಂದು ಮೊಬೈಲ್ ಮೂಲಕ ಮೆಸೆಜ್ ಮಾಡಿದ್ದಳು.


ಆದರೆ ಕಳೆದ ಭಾನುವಾರ ರೋಹಿಣಿ ಹಾಗೂ ಸುಮಂತ್ ಅವರು ಸುಶ್ಮಿತಾಳ ಸೀಮಂತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದರು. ಮಂಗಳವಾರ ಬೆಂಗಳೂರಿನಿಂದ ಇಬ್ಬರೂ ರೈಲಿನಲ್ಲಿ ಊರಿಗೆ ಹೊರಟಿದ್ದರು.
ಈ ವೇಳೆ ರೋಹಿಣಿ ತಂದೆಗೆ ಎರಡು ಬಾರಿ ಕರೆ ಮಾಡಿ ಚೆನ್ನಾಗಿಯೇ ಮಾತನಾಡಿದ್ದಾಳೆ. ಪತಿ ಸುಮಂತ್ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೈಲಿನಿಂದ ರೋಹಿಣಿಯನ್ನು ಕೆಳಗಿಳಿಸಿಕೊಂಡು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕೆರೆಯ ಬಳಿ ಕರೆದುಕೊಂಡು ಬಂದಿದ್ದಾನೆ.


ಕೆರೆಯಲ್ಲಿ ಗ್ರಾಮದ ಮಹಿಳೆಯರು ಬಟ್ಟೆ ಒಗೆಯುತ್ತಿದ್ದನ್ನು ಕಂಡ ಸುಮಂತ್, ಪತ್ನಿಗೆ ಇಲ್ಲೇ ಇರು ಎಂದು ಹೇಳಿ ಮರೆಯಾಗಿದ್ದಾನೆ. ರೋಹಿಣಿ ಕೆರೆ ಬಳಿ ಒಬ್ಬಳೇ ನಿಂತಿದ್ದನ್ನು ಅಲ್ಲಿದ್ದ ಮಹಿಳೆಯರು ನೋಡಿದ್ದಾರೆ. ಇದಾದ ಬಳಿಕ ರೋಹಿಣಿ ನಾಪತ್ತೆಯಾಗಿದ್ದಾಳೆ. ತಂದೆ ಎ?್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ.
ಇದರಿಂದ ಅನುಮಾನಗೊಂಡ ಪೋ?ಕರು ಪೊಲೀಸರಿಗೆ ದೂರು ನೀಡಿದ್ದಾರೆ. ಟವರ್ ಲೊಕೇ?ನ್ ಮೂಲಕ ರೋಹಿಣಿ ಮೊಬೈಲ್ ಇರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೆರೆ ಬಳಿ ಬಂದು ನೋಡಿದಾಗ ದಡದಲ್ಲಿ 1760 ರೂ.ಹಣ, ಮೊಬೈಲ್ ಹಾಗೂ ಚಪ್ಪಲಿ ಕಂಡು ಬಂದಿದೆ.


ಅನುಮಾನಗೊಂಡು ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ರೋಹಿಣಿ ಶವ ಪತ್ತೆಯಾಗಿದೆ. ಗಂಡ ಸುಮಂತ್ ತನ್ನ ಮಗಳನ್ನು ಹೊಡೆದು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಆಕೆಯ ಮೈಮೇಲೆ ಇರುವ ಗಾಯದ ಗುರುತುಗಳೇ ಇದಕ್ಕೆ ಸಾಕ್ಷಿ ಎಂದು ಪೋ?ಕರು ಆರೋಪಿಸಿದ್ದಾರೆ.


ಮೃತ ದೇಹವನ್ನು ಚನ್ನರಾಯಪಟ್ಟದ ಶವಾಗಾರಕ್ಕೆ ಸಾಗಿಸಲಾಯಿತು. ಮೃತ ರೋಹಿಣಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮ ಮಗಳ ಸಾವಿಗೆ ಸುಮಂತ್, ಮೀನಾಕ್ಷಿ, ಸುಶ್ಮಿತಾ ಹಾಗೂ ಪ್ರಮೋದ್ ಅವರೇ ಕಾರಣ ಎಂದು ಪೋ?ಕರು ದೂರು ನೀಡಿದ್ದು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net