ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

dowry harassment
Published on

ಮೈಸೂರು: ಪತಿ ಹಾಗೂ ಅವರ ಮನೆಯವರ ಕಿರುಕುಳದಿಂದ ಬೇಸತ್ತ ವಿದ್ಯಾರಣ್ಯಪುರಂನ ಗೃಹಿಣಿ ವೈ.ಪ್ರೇರಣಾ ನೇಣು ಬಿಗಿದು ಆತ್ಮಹತ್ಯೆ ವಾಡಿಕೊಂಡಿದ್ದಾರೆ.

ಪತಿ ಸುೋಷ್ ಹಾಗೂ ಅವರ ಮನೆಯವರು ಹೆಚ್ಚಿನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಶಿವರಾತ್ರಿ ಹಬ್ಬದ ದಿನದಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಅವರ ತಂದೆ ಮನೆಯಲ್ಲಿಯೇ ವಾಸವಿದ್ದರು.

ಈ ನಡುವೆ ಏ.24ರಂದು ಪತಿ ಸುೋಷ್ ಅವರು ದೂರವಾಣಿ ಕರೆ ವಾಡಿ ನಿಂದಿಸಿದ್ದಾರೆ. ಇದರಿಂದ ಬೇಸತ್ತ ನನ್ನ ಮಗಳು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ವಾಡಿಕೊಂಡಿದ್ದಾರೆ ಎಂದು ಮತರ ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರೇರಣಾ ಹಾಗೂ ಬೆಂಗಳೂರು ಮೂಲದ ಸುೋಷ್ ಅವರ ನಡುವೆ 2022ರಲ್ಲಿ ವಿವಾಹವಾಗಿತ್ತು. 250 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net