ವರದಕ್ಷಿಣೆ ಕಿರುಕುಳ 5 ವರ್ಷ ಸಾದಾ ಸಜೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಚಿತ್ರದುರ್ಗ: ವರದಕ್ಷಿಣೆ ಕಿರುಕುಳ ನೀಡಿದ ಆರೋಪಿ ಸೈಯದ್ ಸೈಫುಲ್ಲಾಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಸಾದಾ ಸಜೆ, 4.6 ಲಕ್ಷ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಅಪ್ಜಪರ್ವಿನ್ ಎಂಬುವರ ಜೊತೆ ಸೈಯದ್ ಸೈಫುಲ್ಲಾ ವಿವಾಹ 2016ರ ಡಿ. 15ರಂದು ಆಗಿತ್ತು. ಆರೋಪಿ 5 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ವಧುವಿನ ತಮ್ಮ ಅಜರುದ್ದೀನ್ 4.5 ಲಕ್ಷ ರೂ., 15 ತೊಲ ಬಂಗಾರ, ಗೃಹ ಬಳಕೆ ಸಾಮಗ್ರಿ ನೀಡಿದ್ದು, ಸ್ವಲ್ಪ ದಿನ ಚೆನ್ನಾಗಿ ನೋಡಿಕೊಂಡಿದ್ದ. ಆನಂತರ ಇನ್ನುಳಿದ 50 ಸಾವಿರ ರೂ. ನೀಡುವಂತೆ ಪದೇ ಪದೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ ಎಂದು 2019ರ ಆ. 19ರಂದು ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಆರೋಪ ಸಾಬೀತಾದ ಕಾರಣ ಮೇಲ್ಕಂಡಂತೆ ತೀರ್ಪು ನೀಡಿದ್ದಾರೆ. ಹೆಚ್ಚುವರಿಯಾಗಿ 6 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ 4.5 ಲಕ್ಷ ರೂ. ಅಪ್ಜಪರ್ವಿನ್‌ಗೆ ನೀಡುವಂತೆ ಆದೇಶಿಸಿದ್ದಾರೆ. ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಗಣೇಶನಾಯ್ಕ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net