ವರದಕ್ಷಣೆ ಕಿರುಕುಳ ಮಹಿಳೆ ಸಾವು; ಪತಿ ಸೇರಿ ಮೂವರ ಬಂಧನ

ವರದಕ್ಷಣೆ ಕಿರುಕುಳ ಮಹಿಳೆ ಸಾವು; ಪತಿ ಸೇರಿ ಮೂವರ ಬಂಧನ
Published on

ಹಾಸನ: ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹೋಬಳಿ ನೆಟ್ಟೆಕೆರೆ ಗ್ರಾಮದ ಅನುಷಾ ಎಂಬ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೋಷಕರ ದೂರಿನ ಮೇರೆಗೆ ಪತಿ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದರು.

ಮೂರು ವರ್ಷಗಳ ಹಿಂದೆ ಅನುಷಾ ಅವರನ್ನು ಕಿರಣ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿ ಇದ್ದರು. ನಂತರದ ದಿನಗಳಲ್ಲಿ ಅನುಷಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಗ್ರಾಮಸ್ಥರು ರಾಜಿ- ಪಂಚಾಯ್ತಿಯನ್ನು ಕೂಡ ಮಾಡಿದ್ದರು. ಜುಲೈ 9ರಂದು ಭಾನುವಾರ ಅನುಷಾ ಸಾವನ್ನಪ್ಪಿದ್ದು, ಈಕೆ ಗಂಡ ಅವರ ತಂದೆಯ ಮನೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಮೃತರ ಸಂಬಂಧಿಕರು ಬಂದು ನೋಡಲಾಗಿ ಕುತ್ತಿಗೆಯಲ್ಲಿ ಗಾಯವಾಗಿರುವುದರಿಂದ ಅನುಮಾನಗೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ನಂತರ ಪ್ರಾಥಮಿಕ ವರದಿಯಲ್ಲಿ ಉಸಿರುಗಟ್ಟಿಸಿ ಅಥವಾ ನೇಣು ಬಿಗಿದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮೃತಳ ಸಂಬಂಧಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ, ಪತಿ ಕಿರಣ್ (25) ಅವರ ತಂದೆ ಚಂದ್ರೇಗೌಡ (50) ತಾಯಿ ಚಂದ್ರಮ್ಮ (47) ಇವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net