ವರಕೋಡು ಗ್ರಾಮದ ಕಲ್ಯಾಣಿ ಸ್ವಚ್ಛತೆ

mysore
Published on

ಮೈಸೂರು: ವರುಣ ಹೋಬಳಿಯ ವರಕೋಡು ಗ್ರಾಮದ ಕಲ್ಯಾಣಿ ಸ್ವಚ್ಛಗೊಳಿಸುವ ಮೂಲಕ ವಿಶ್ವ ಛಾಯಾಗ್ರಾಹಕ ದಿನವನ್ನು ಆಚರಿಸಲಾಯಿತು.

ಮೈಸೂರು ಫೋಟೋ ಗ್ರಾಫರ್ಸ್ ಕ್ಲಬ್‌ನ (ಎಂಪಿಸಿ) ಸದಸ್ಯರು ಸೇರಿ ಕಲ್ಯಾಣಿಯ ಸುತ್ತಮುತ್ತಲಿನ ಪ್ಲಾಸ್ಟಿಕ್, ಘನ ತ್ಯಾಜ್ಯಗಳು, ಗಿಡಗಂಟಿಗಳನ್ನು ವಿಲೇವಾರಿ ಮಾಡಿ ಅರ್ಥಪೂರ್ಣವಾಗಿ ಛಾಯಾಗ್ರಾಹಕರ ದಿನ ಆಚರಿಸಿದರು.

ಕ್ಲಬ್ ಅಧ್ಯಕ್ಷ ಮನುಕುಮಾರ್ ಮಾತನಾಡಿ, ಛಾಯಾಗ್ರಾಹಕರು ತಮ್ಮ ವೃತ್ತಿಯ ಮೂಲಕ ಸುಂದರ ಕ್ಷಣ ಸೆರೆ ಹಿಡಿಯಲು ಉತ್ತಮ ಪರಿಸರ ಮುಖ್ಯ. ಹೀಗಾಗಿ ಸುತ್ತಮುತ್ತಲಿನ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ಅದರಲ್ಲಿಯೂ ಇತಿಹಾಸ ಪ್ರಸಿದ್ಧ ವರಕೋಡು ಕಲ್ಯಾಣಿ ಮಹತ್ವ ಪಡೆದಿದ್ದು, ಇದನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಶರತ್ ಕುಮಾರ್, ಖಜಾಂಚಿ ಸಿ.ಎಂ.ಪ್ರತಾಪ್, ಕಲಾವಿದ ಸುರೇಶ್, ಗ್ರಾಮದ ಮುಖಂಡರಾದ ಮಹೇಶ್, ರವಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net