ಗರ್ಭಾವಸ್ಥೆ ಮುನ್ನ ಉತ್ತಮ ಆರೋಗ್ಯ ಹೊಂದಿ

11-01.MDL02
Published on

ಮುದಗಲ್: ತಾಯ್ತನ ಮಹಿಳೆಯರಿಗೆ ದೇವರು ಕೊಟ್ಟ ವರವಾಗಿದ್ದು, ಗರ್ಭಾವಸ್ಥೆ ಮುನ್ನ ಉತ್ತಮ ಆರೋಗ್ಯ ಹೊಂದಬೇಕೆಂದು ಡಾ.ಚಂದ್ರಕಾಂತ ಹೇಳಿದರು.

ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷಧ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಜಿ.ಎನ್.ಪೃಥ್ವಿ, ಡಾ.ವಿನೋದಕುಮಾರ, ಸಿಬ್ಬಂದಿ ರಾಜೇಶ್ವರಿ, ಸಿದ್ದಪ್ಪ, ಆರೋಗ್ಯ ಮಿತ್ರ ಬಸವರಾಜ ಬುದ್ದಿನ್ನಿ, ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net