ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಎಲ್ಲಾ ಸರ್ಕಾರಗಳು ವಿಫಲ

23 ckm 2 m.l.murthy
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ
Published on

ಚಿಕ್ಕಮಗಳೂರು: ರೈತರಿಗೂ ತೊಂದರೆಯಾಗದ ರೀತಿಯಲ್ಲಿ ಹಾಗೂ ಆನೆ ಸೇರಿದಂತೆ ಇತರೆ ವನ್ಯ ಜೀವಿಗಳಿಗೆ ತೊಂದರೆಯಾಗದ ರೀತಿಯಲ್ಲಿ ನೈಸರ್ಗಿಕ ಕಾಡು ಬೆಳೆಸುವಲ್ಲಿ ಪಕ್ಷಾತೀತವಾಗಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಸರಿಯಾದ ಪರಿಕಲ್ಪನೆ ಇಲ್ಲದ ಅಧಿಕಾರಿಗಳು ಅರಣ್ಯ ಇಲಾಖೆಯಲ್ಲಿ ಇರುವುದರಿಂದ ಆಗಬೇಕಾಗಿರುವ ಕೆಲಸಗಳು ಅರ್ಥಪೂರ್ಣವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗಳಿಗೆ ಸೂಕ್ತವಾದ ಆಹಾರವನ್ನು ಅರಣ್ಯಗಳಲ್ಲಿ ಕಲ್ಪಿಸುವ ಮುಖಾಂತರ ಆನೆ ಹಾವಳಿ ತಡೆಯಬಹುದಾಗಿದ್ದರೂ ಉz್ದೆÃಶಪೂರ್ವಕವಾಗಿ ಆನೆಗಳಿಗೆ ಅಗತ್ಯವಿರುವ ಆಹಾರವನ್ನು ಕಾಡಿನಲ್ಲಿ ಬೆಳೆಯದೆ ಆನೆಗಳು ನಾಡಿಗೆ ಬರುವಲ್ಲಿ ಅರಣ್ಯ ಇಲಾಖೆ ತನ್ನ ಪಾತ್ರ ನಿರ್ವಹಿಸುತ್ತಿದೆ ಎಂದು ದೂರಿದರು.

ಆನೆ ಸೇರಿದಂತೆ ವನ್ಯಪ್ರಾಣಿಗಳಿಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಕಾಡಿನಲ್ಲಿ ನೈಸರ್ಗಿಕವಾಗಿ ಲಭ್ಯವಾಗುವಂತೆ ಕ್ರಮ ಕೈಗೊಂಡರೆ ವನ್ಯಜೀವಿಗಳು ಹಾಗೂ ಮಾನವನ ಸಂಘರ್ಷ ಗಣನೀಯವಾಗಿ ಕಡಿಮೆಯಾಗುತ್ತದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಪರಿಣಿತರ ಹಾಗೂ ರೈತರ ಸಭೆ ನಡೆಸಿ ಸಲಹೆ ಪಡೆಯುವ ಮೂಲಕ ವನ್ಯಜೀವಿ ಹಾಗೂ ಮಾನವ ಸಂಘರ್ಷ ತಡೆಯಲು ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಡಿನಲ್ಲಿ ಮಾವು, ಬಿದಿರು, ಬೈನೆ, ಬಾಳೆ, ಹೊಂಗೆ, ತಡಚಲು, ಹಲಸು ಮರಗಳನ್ನು ಬೆಳೆಸಿದರೆ ವನ್ಯಜೀವಿಗಳು ಆಹಾರ ಅರಸಿ ನಾಡಿನತ್ತ ಬರುವುದು ತಪ್ಪುತ್ತದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿನಲ್ಲಿ ವಿದೇಶಿ ಮರವಾಗಿರುವ ತೇಗವನ್ನು ಬೆಳೆಸಲು ಆಸಕ್ತಿ ತೋರುತ್ತಿದ್ದಾರೆ. ಇದೆ ವನ್ಯಜೀವಿಗಳು ನಾಡಿನತ್ತ ಬರಲು ಪ್ರಮುಖ ಕಾರಣವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಅಧಿಕಾರ ನಡೆಸಿರುವ ಎಲ್ಲಾ ಸರ್ಕಾರಗಳು ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಿಸಲು ಪರೋಕ್ಷವಾಗಿ ಸಹಕರಿಸಿವೆ. ಭ್ರಷ್ಟ ಅಧಿಕಾರಿಗಳು ಅನರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ಕೆಲಸ ಮಾಡಿದ್ದಾರೆ. ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳ ಎದುರು ಬಿಪಿಎಲ್ ಕಾರ್ಡು ದಾರರ ಮಾಹಿತಿ ಪ್ರಕಟಿಸಿದರೆ ಸಾಕು ಯಾರು ಅನಹರಿದ್ದಾರೆ ಎಂದು ಸ್ಥಳೀಯರೇ ಸಂಬAಧಿಸಿದವರಿಗೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ಇತ್ತೀಚಿಗೆ ವಕ್ಫ್ ಆಸ್ತಿ ಗೊಂದಲ ಆರಂಭಗೊAಡಿದೆ. ಸುಪ್ರೀಂ ಕೋರ್ಟ್ ಸಹ ೧೯೪೭ರಲ್ಲಿ ಇದ್ದ ಸ್ಥಿತಿ ಮುಂದುವರಿಸಲು ಹೇಳಿದೆ. ಬದುಕಿನ ಅಗತ್ಯಕ್ಕಾಗಿ ಯಾರು ಹಲವು ದಶಕಗಳಿಂದ ಸಾಗುವಳಿ ಮಾಡಿದ್ದಾರೆಯೋ, ಆ ನಿಜವಾದ ರೈತರನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net