

ಬೆಳಗಾವಿ: ವನ್ಯಜೀವಿಗಳು ಪರಿಸರದ ಶಕ್ತಿ. ಅವುಗಳಿದ್ದರೆ ಮಾತ್ರ ಕಾಡು, ಅರಣ್ಯಗಳು ನಮಗೆ ಉಸಿರಾಗಲು ಸಾಧ್ಯ. ವನ್ಯಜಿವಿಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಬೆಳಗಾವಿ ಡಿಎಫ್‌ಒ ಹರ್ಷ ಬಾನು ಹೇಳಿದರು.
ನಗರ ಸಮೀಪದ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಅರಣ್ಯ ಇಲಾಖೆ ಹಾಗೂ ವನ್ಯಜಿವಿ, ಪರಿಸರ ಅಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನ್ಯಜೀವಿ ದಿನಾಚರಣೆ ಮತ್ತು ಬೆಳಗಾವಿ ವನ್ಯಜಿವಿ, ಪರಿಸರ ಅಭಿವೃದ್ಧಿ ವೇದಿಕೆಯ ತೃತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೃಗಾಲಯ ಇದೀಗ ಎಲ್ಲರನ್ನೂ ಆಕರ್ಷಿಸುತ್ತಿರುವುದು ಖುಷಿ ತಂದಿದೆ. ಪ್ರಾಣಿ ದತ್ತು ತೆಗೆದುಕೊಳ್ಳಲು ದಾನಿಗಳು ಮುಂದಾಗಬೇಕು. ಬರುವ ದಿನಮಾನಗಳಲ್ಲಿ ಹೆಚ್ಚೆಚ್ಚು ಕಾಡುಪ್ರಾಣಿಗಳನ್ನು ಸೇರಿಸಿ ಮೃಗಾಲಯವನ್ನು ಉನ್ನತ ದರ್ಜೆಗೇರಿಸಲಾಗುವುದು ಎಂದು ಹೇಳಿದರು.
ಮಾಜಿ ಮೇಯರ್ ಎನ್.ಬಿ.ನಿರ್ವಾಣಿ ಮಾತನಾಡಿ, ಹುಲಿ, ಸಿಂಹ ಸೇರಿ ಇತರ ಎಲ್ಲ ಕಾಡು ಪ್ರಾಣಿಗಳನ್ನು ನೋಡುವ ಅವಕಾಶ ಇಲ್ಲಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎನ್.ಮಿಸಾಳೆ, ನಿರ್ದೇಶಕ ವಿಲಾಸ ಕೆರೂರ, ಎಸ್.ಜಿ.ಕಲ್ಯಾಣಿ, ಡಿ.ಎಂ.ಟೊಣ್ಣೆ, ಕೆಂಪಣ್ಣ ವನ್ನೂರಿ, ಅಭಿನಂದನ ಮಗದುಮ್, ಪ್ರಸನ್ನ ಬೆಲ್ಲದ, ಡಾ.ನಾಗೇಶ ಹುಯಿಲಗೋಳ, ಪರಶುರಾಮ ಗಿರೆಣ್ಣವರ, ಯಲ್ಲಪ್ಪ ಗಿರೆಣ್ಣವರ ಸೇರಿ ಇತರರಿದ್ದರು. ಅಧ್ಯಕ್ಷ ಸುರೇಶ ಉರಬಿನಹಟ್ಟಿ ಸ್ವಾಗತಿಸಿ, ನಿರೂಪಿಸಿದರು. ಖಜಾಂಚಿ ಜಗದೀಶ ಮಠದ ವಂದಿಸಿದರು.