ವಧು ವರರ ಸಮಾವೇಶ ಜೂ.೧ರಂದು

Sharanu Modi2
Published on

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಶರಣಬಸವೇಶ್ವರ ಸಂಸ್ಥಾನ, ಶಿವಪರ‍್ವತಿ ಮ್ಯಾಟ್ರಿಮೋನಿಯಲ್​ ಟ್ರಸ್ಟ್​ ಸಹಯೋಗದಲ್ಲಿ ನಗರದ ಶ್ರೀ ಶರಣಬಸವೇಶ್ವರ ದೇವಾಲಯ ಆವರಣದ ಅನುಭವ ಮಂಟಪದಲ್ಲಿ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡದವರಿಗೆ ರಾಜ್ಯಮಟ್ಟದ ವಧು ವರರ ಸಮಾವೇಶ ಜೂ.೧ರಂದು ಬೆಳಗ್ಗೆ ೧೦ರಿಂದ ಸಂಜೆ ೬ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭೆ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಹೇಳಿದರು.

ಒಳಪಂಗಡಗಳಾದ ಜಂಗಮ, ಪಂಚಮಸಾಲಿ, ದೀಕ್ಷ, ಆದಿ, ಬಣಜಿಗ, ಬಣಗಾರ, ರೆಡ್ಡಿ, ಶಿವಸಿಂಪಿಗ, ನೇಕಾರ, ಕುಂಬಾರ, ಹಠಗಾರ, ಮಾಲಗಾರ, ಗಾಣಿಗ, ಸಜ್ಜ, ಕರುವಿನ ಶೆಟ್ಟಿ, ಹೂಗಾರ, ಕುಡುಒಕ್ಕಲಿಗ ಸೇರಿ ಎಲ್ಲ ಒಳಪಂಗಡಗಳವರು ಭಾಗವಹಿಸಬಹುದು. ಮರು ಮದುವೆ, ವಿಳಂಬ ಮದುವೆ ಬಯಸುವವರು ಇದರ ಲಾಭ ಪಡೆಯಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಡಾ.ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ.ದಾಾಯಿಣಿ ಅಪ್ಪ ಸಾನ್ನಿಧ್ಯದಲ್ಲಿ ಸಮಾವೇಶವನ್ನು ಚಿ.ದೊಡ್ಡಪ್ಪ ಅಪ್ಪ ಉದ್ಘಾಟಿಸಲಿದ್ದಾರೆ. ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವರಾಜ ದೇಶಮುಖ, ಶರಣು ಮೋದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಂಯೋಜಕ ಚಂದ್ರಶೇಖರ ಕಕ್ಕೇರಿ ಮಾತನಾಡಿ, ವಧು ವರರು ಕಡ್ಡಾಯವಾಗಿ ಇರಬೇಕು, ವಧು, ವರರ ಜತೆ ಇಬ್ಬರಿಗೆ ಮಾತ್ರ ಅವಕಾಶವಿದೆ. ಬಯೋಡೇಟಾ, ಪೋಸ್ಟ್​ ಕರ‍್ಡ್​ ಅಳತೆ ಚಿತ್ರ ತರಬೇಕು. ಮೇ ೩೦ರೊಳಗೆ ನೋಂದಣಿ ಮಾಡಬೇಕು. ಸ್ಥಳದಲ್ಲೂ ನೋಂದಣಿ ಮಾಡಲಾಗುವುದು ಎಂದರು.

ನೋಂದಣಿಗೆ ೯೬೩೨೫೯೨೫೫೫, ೯೯೭೨೧೫೭೫೬೭, ೯೪೪೮೧೪೬೮೧೨, ೯೯೮೬೩೮೯೫೪೭, ೮೧೦೫೩೨೭೭೭ ಗೆ ಸಂರ‍್ಕಿಸಬೇಕು ಎಂದು ತಿಳಿಸಿದರು.

ಪ್ರಮುಖರಾದ ಬಸವರಾಜ ದೇಶಮುಖ, ಸಿದ್ದಮ್ಮ ಪಾಟೀಲ್​, ಡಾ.ನಾಗವೇಣಿ ಪಾಟೀಲ್​ ರೇವೂರ, ಶ್ರೀದೇವಿ, ಡಾ.ಸುಧಾ ಹಾಲಕಾಯಿ, ಸೋಮಶೇಖರ ಹಿರೇಮಠ, ಕಲ್ಯಾಣರಾವ ಯಳಮಡಗಿ, ವಿರೇಶ ಗಂಧದ ಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net