

ಹುಬ್ಬಳ್ಳಿ: ಮಹಾ ಶಿವರಾತ್ರಿ ನಿಮಿತ್ತ ಫೆ. 26ರಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಧಾಲಯಗಳು ಹಾಗೂ ಎಲ್ಲ ವಿಧದ ಮಾಂಸದ ಅಂಗಡಿಗಳನ್ನು ಬಂದ್ ಇಡಲು ಹು-ಧಾ ಮಹಾನಗರ ಪಾಲಿಕೆ ಸೂಚಿಸಿದೆ.
ತಪ್ಪಿದಲ್ಲಿ ಪಾಲಿಕೆಯಿಂದ ಟ್ರೇಡ್ ಲೈಸನ್ಸ್ ರದ್ದು ಪಡಿಸಿ, ಸರ್ಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.