

ಕೊಳ್ಳೇಗಾಲ: ಇತ್ತೀಚೆಗೆ ಹನೂರಿನಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಟ್ಟಣದ ಕಾರ್ನಸ್ಟೋನ್ ಪದವಿಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ ವಿಭಾಗದಲ್ಲಿ ಬಾಲಕಿಯರ ಉದ್ದ ಜಿಗಿತದಲ್ಲಿ ಸುಶ್ಮಿತಾ ಪ್ರಥಮ, ಹಾಗೂ ಬಾಲಕರ ವಿಭಾದಲ್ಲಿ ಸಂತೋಷ್ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ಸುಶ್ಮಿತಾ ಪ್ರಥಮ ಹಾಗೂ 100 ಮೀ. ಓಟದಲ್ಲಿ ಸುಶ್ಮಿತಾ ದ್ವಿತೀಯ ಹಾಗೂ 200 ಮೀ. ಓಟದಲ್ಲಿ ಶಿವಾನಿ ತೃತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ ಬಾಸ್ಕೆಟ್‌ಬಾಲ್ ಆಟದಲ್ಲಿ ಕಾಲೇಜಿನ ಸಂಜನಾ ಮತ್ತು ತಂಡದವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ತರಬೇತುದಾರರಾದ ವಿಶ್ವಾಸ್, ಕುಶಾಲ್ ಹಾಗೂ ಆಕಾಶ್ ಅವರನ್ನು ಸಂಸ್ಥೆಯ ಚೇರ್ಮನ್ ಎನ್.ಮಹೇಶ್, ಅಧ್ಯಕ್ಷ ರೂಬನ್ ಮೋಸೆಸ್, ಪ್ರಾಂಶುಪಾಲ ಡಾ.ರೋಷನ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಪವನ್ ಹಾಗೂ ಉಪನ್ಯಾಸಕರು ಅಭಿನಂದಿಸಿದರು.
ಹನೂರಿನಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾ ಕೂಟ ದಲ್ಲಿ ಭಾಗವಹಿಸಿದ್ದ ಪಟ್ಟಣದ ಕಾರ್ನ?? ಸ್ಟೋನ್ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.ಎನ್. ಮಹೇಶ್, ರೂಬನ್ ಮೋಸೆಸ್, ಡಾ.ರೋಷನ್ ಇತರರು ಇದ್ದಾರೆ.