ವಿದ್ಯಾರ್ಥಿಗಳು ಗುರಿ ಸಾಧನೆಗೆ ಪ್ರಯತ್ನಿಸಲಿ

ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಪುಷ್ಪಾತಾಯಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ, ಕ್ರೀಡಾ- ಸಾಂಸ್ಕೃತಿಕ ಚಟುವಟಿಕೆಗೆ ಚಾಲನೆ ಕಾರ್ಯಕ್ರಮವನ್ನು ಶಾಸಕ- ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಧರ್ಮಲಿಂಗಯ್ಯ ಗುಡಗುಂಟಿ, ಪಾರ್ವತಿ ಗುಡಗುಂಟಿ, ಪ್ರೊ.ವೈ.ಬಿ.ಹೊಟ್ಟಿ ಇತರರಿದ್ದರು.
ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಪುಷ್ಪಾತಾಯಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ, ಕ್ರೀಡಾ- ಸಾಂಸ್ಕೃತಿಕ ಚಟುವಟಿಕೆಗೆ ಚಾಲನೆ ಕಾರ್ಯಕ್ರಮವನ್ನು ಶಾಸಕ- ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಧರ್ಮಲಿಂಗಯ್ಯ ಗುಡಗುಂಟಿ, ಪಾರ್ವತಿ ಗುಡಗುಂಟಿ, ಪ್ರೊ.ವೈ.ಬಿ.ಹೊಟ್ಟಿ ಇತರರಿದ್ದರು.
Published on

ಜಮಖಂಡಿ: ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಗುರಿ ಇಟ್ಟುಕೊಂಡು ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಶಾಸಕ- ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪುಷ್ಪಾತಾಯಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ 2023-24ನೇ ಶೈಕ್ಷಣಿಕ ಸಾಲಿನ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳು ನಾಳೆ ಭವ್ಯ ಭಾರತದ ಭವಿಷ್ಯ ಕಟ್ಟುವವರು. ದೇಶಕ್ಕೆ ಬೇಕಾದ ವ್ಯಕ್ತಿಗಳಾಗಿ ಮಕ್ಕಳು ಬೆಳೆಯಬೇಕು, ಸಮಾಜ- ದೇಶ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ ದೇಶ ಹಾಗೂ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸವಾಲುಗಳನ್ನು ಎದುರಿಸಿ ಮುನ್ನುಗ್ಗಬೇಕು. ಉನ್ನತ ಹುದ್ದೆ ಅಲಂಕರಿಸುವ ಗುರಿ ಹೊಂದಬೇಕು. ಗುರು-ಹಿರಿಯರನ್ನು ಗೌರವ ಭಾವದಿಂದ ಕಾಣಬೇಕು ಎಂದರು.

ಮಹಾಲಿಂಗಪುರದ ಸಾಹಿತಿ ಅಶೋಕ ನರೋಡೆ ಮಾತನಾಡಿ, ಮನುಷ್ಯ ಕುಲ ಒಂದೇಯಾಗಿದೆ. ಜಾತಿಗಳನ್ನು ಬಿಟ್ಟು ಸಹೋದರ ಭಾವದಿಂದ ಜೀವಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾಜಗಳು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ರಾಜ್ಯದ 224 ಶಾಸಕರಲ್ಲಿ ನಾಡಿನ ಹೆಮ್ಮೆಯ ವಿಶ್ವವಿದ್ಯಾಲಯದ ಗೌರವ ನಾಡೋಜ ಪದವಿ ಪಡೆದವರಲ್ಲಿ ನಾಡೋಜ ಜಗದೀಶ ಗುಡಗುಂಟಿ ಅವರೊಬ್ಬರೇ ಎಂಬುದು ಹೆಮ್ಮೆಯ ವಿಷಯ ಎಂದರು.

ಸಂಸ್ಥೆ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ ಮಾತನಾಡಿ, ಮಕ್ಕಳು ದೇಶ ವಿದೇಶದ ಅಭಿವೃದ್ಧಿ ವಿಷಯಗಳು, ಮಹಾನ್ ನಾಯಕರ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳು ಸದಾಕಾಲ ಅಧ್ಯಯನಶೀಲರಾಗಬೇಕು ಎಂದರು.

ಸಂಸ್ಥೆ ಆಡಳಿತಾಧಿಕಾರಿ ಪ್ರೊ.ವೈ.ಬಿ.ಹೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾರ್ವತಿ ಗುಡಗುಂಟಿ, ಡಾ.ಎಸ್.ಎಸ್.ಹೂಲಿ, ಕೆ.ವೈ.ಭೂತಾಳಿ ಇತರರಿದ್ದರು. ಬಿ.ಎಂ.ಹಿಡಕಲ್ ಪ್ರಾರ್ಥಿಸಿದರು. ಕೆ.ಜಿ.ಗುರವ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net