

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ 1996ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಗಿತ್ತು.
ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ ಮಾತನಾಡಿ, ವಿದ್ಯಾರ್ಥಿಗಳ ಅಭಿಮಾನ ನಿರಂತರವಾಗಿರಬೇಕು. ವಿದ್ಯಾದಾನ ಮಾಡಿದ ಸಂಸ್ಥೆಗೆ ಸಹಕಾರ ನೀಡಬೇಕು. ಗುರು ಹಿರಿಯರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ಆಯುರ್ವೆದ ಸೇವಾ ಸಮಿತಿ ಸಭಾಪತಿ ಗೋವಿಂದ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳೇ ವಿದ್ಯಾರ್ಥಿಗಳ ಸಂಘದ ಕಟ್ಟಡವನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಹಳೆಯ ವಿದ್ಯಾರ್ಥಿಗಳು ತಮಗೆ ಪಾಠ ಮಾಡಿದ ಶಿಕ್ಷಕರನ್ನು ಸನ್ಮಾನಿಸಿದರು. ಸಮಿತಿ ಕಾರ್ಯದರ್ಶಿ ಸಂಜೀವ ಜೋಶಿ, ಖಜಾಂಚಿ ಎಸ್.ಆರ್. ಮಾಮಲೇದೇಶಪಾಂಡೆ, ಹಳೇ ವಿದ್ಯಾರ್ಥಿ ಸಂಘದ ಡಾ.ಸಿ.ಎ. ಕಿಶೋರ, ಡಾ. ಪ್ರದೀಪ ಅಗ್ನಿಹೋತ್ರಿ, ಡಾ. ಸೋಮಶೇಖರ ಹುದ್ದಾರ, ಡಾ. ಮಹೇಶ ಸಾಲಿಮಠ, ಡಾ.ಕೆ.ವೈ. ಕೃಷ್ಣಾಜಿ, ಡಾ. ಅಹಲ್ಯಾಬಾಯಿ, ಡಾ.ಆರ್.ಜೆ. ಮಾಯಣ್ಣವರ, ಡಾ. ನಾಗರಾಜಾಚಾರ್ಬಡಿಗೇರ, ಡಾ.ಆರ್.ಜಿ. ದೇಸಾಯಿ, ಡಾ.ಸಿ.ಪಿ.ದಿಕ್ಷೀತ, ಡಾ.ಬಿ.ಬಿ. ಹುನಗುಂದ, ಡಾ.ಎಸ್.ವಿ. ಹಿರೇಮಠ, ಡಾ.ಎಂ.ಎ. ಹುಲ್ಲೂರ, ಡಾ.ಬಿ.ಬಿ. ಹುನಗುಂದ ಇತರರು ಇದ್ದರು.