ವಡಗಾಂವ(ದೆ) ಗ್ರಾಪಂಗೆ ಸವಿತಾ ನೂತನ ಅಧ್ಯಕ್ಷೆ

Capture
Published on

ಔರಾದ್: ವಡಗಾಂವ(ದೆ) ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಸವಿತಾ ಸಂಜುಕುಮಾರ ಚವ್ಹಾಣ್ ಅವಿರೋಧ ಆಯ್ಕೆಯಾಗಿದ್ದಾರೆ.

17 ಸ್ಥಾನ ಹೊಂದಿದ್ದ ಗ್ರಾಪಂನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸವಿತಾ ಚವ್ಹಾಣ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಬಿರೇಂದ್ರಸಿಂಗ್ ಠಾಕೂರ್ ಅವಿರೋಧ ಆಯ್ಕೆ ಘೋಷಿಸಿದರು. ನೂತನ ಅಧ್ಯಕ್ಷೆ ಸವಿತಾ ಮಾತನಾಡಿ, ಎಲ್ಲ ಸದಸ್ಯರ ಬೆಂಬಲದಿಂದ ಆಯ್ಕೆಯಾಗಿದ್ದೇನೆ. ಗ್ರಾಪಂ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಶ್ರಮಿಸೋಣ ಎಂದರು. ಉಪಾಧ್ಯಕ್ಷರಾಗಿ ಶಿವರಾಜ ಡೋಂಪೆ ಮುಂದುವರಿಯಲಿದ್ದಾರೆ ಎಂದು ಪಿಡಿಒ ವಿನೋದ ಕುಲಕಣರ್ಿ ತಿಳಿಸಿದ್ದಾರೆ.

ವಿಜಯೋತ್ಸವ: ಸವಿತಾ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಸದಸ್ಯರಾದ ರಾಜಕುಮಾರ ಹೇಡೆ, ಜೈವಂತ, ರವಿ ಗಂಗಾ, ಭರತ, ಶಿವರಾಜ ಜಾಧವ್, ರವಿ ಪಾಟೀಲ್, ಸರಸ್ವತಿ ಮಲ್ಲಪ್ಪ, ತಿಪ್ಪಮ್ಮ ಶರಣಪ್ಪ, ವಿದ್ಯಾಸಾಗರ, ಘಾಳೆಮ್ಮ ರೇವಣ್ಣಪ್ಪ, ಸರೋಜಿನಿ ಮಹಾದೇವ, ವಿಮಲಾಬಾಯಿ ರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net