ವಜ್ರೋತ್ಸವ ಭಾರತೀ ಮಹೋತ್ಸವಕ್ಕೆ ಸಿದ್ಧತೆ

sri prepare
ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ವರ್ಧಂತಿ ಅಂಗವಾಗಿ ಸಿದ್ಧತೆ ನಡೆದಿದೆ.
Published on

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ 75ನೇ ವರ್ಧಂತಿ ವಜ್ರೋತ್ಸವ ಭಾರತೀ ಮಹೋತ್ಸವ ಏ.3ರಂದು ಆಯೋಜಿಸಲಾಗಿದ್ದು, ಮಠದ ನರಸಿಂಹವನದ ಭಾರತೀನಗರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸಿದ್ಧತೆ ಭರದಿಂದ ಸಾಗಿದೆ.

ಮಾ.30ರಿಂದ ಏ.14 ರವರೆಗೂ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಹೋಮಗಳು ನಡೆಯುವ ಭಾರತೀನಗರದಲ್ಲಿ ಸಿದ್ಧತೆ ನಡೆದಿದೆ. ಮಠದಿಂದ ನರಸಿಂಹವನಕ್ಕೆ ತೆರಳುವ ರಸ್ತೆಯನ್ನು ಅಲಂಕರಿಸಲಾಗುತ್ತಿದ್ದು, ಭಕ್ತಾದಿಗಳು ಶ್ರಮದಾನದ ಮೂಲಕ ಚಪ್ಪರ, ತೋರಣ, ಬಂಟಿಂಗ್ಸ್, ಕೇಸರಿ ಬಾವುಟ ಕಟ್ಟಲಾಗಿದೆ. ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ವರ್ಧಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಗುತ್ತಿದೆ.

ಮಂಗಳವಾರ ಮಧ್ಯಾಹ್ನ ಬಿರುಸಿನ ಮಳೆಯಾಗಿದ್ದು, ಭಾರತೀನಗರದಲ್ಲಿ ಅಳವಡಿಸಿದ್ದ ಶಾಮಿಯಾನಕ್ಕೆ ಸ್ವಲ್ಪ ತೊಂದರೆಯಾಗಿದೆ. ವಾಲಿರುವ ಕಂಬವನ್ನು ಸರಿಪಡಿಸಲಾಗುತ್ತಿದ್ದು, ಮಳೆಯಿಂದ ಯಾವುದೇ ತೊಂದರೆಯಾಗದಂತೆ ಸಿದ್ಧತೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net