ವಜಾ ಪ್ರಕರಣದಲ್ಲಿ ಸಚಿವರ ಪಾತ್ರ ಇಲ್ಲ

Published on

* ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ವಿವರ

ಪಿರಿಯಾಪಟ್ಟಣ: ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರು ನಿರ್ದೇಶಕ ಸ್ಥಾನದಿಂದ ವಜಾಗೊಂಡಿರುವ ಪ್ರಕರಣದಲ್ಲಿ ಸಚಿವ ಕೆ.ವೆಂಕಟೇಶ್ ಅವರ ಪಾತ್ರವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ತಿಳಿಸಿದರು. ಪ್ರಸನ್ನ ಅವರು ಕಗ್ಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಪಡೆದು ನಿರ್ದೇಶಕರಾಗಿರುವುದು ಅಕ್ರಮವಾಗಿದೆ. ಇವರ ಆಡಳಿತ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಗ್ರಾಮಸ್ಥರು ಸಹಕಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ತನಿಖೆ ನಡೆಸಿ ಕಾನೂನು ಕ್ರಮ ವಹಿಸಿದ್ದು, ಸದಸ್ಯತ್ವ ವಜಾಗೊಂಡಿದೆ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಈಚೂರು ಲೋಕೇಶ್ ಮಾತನಾಡಿ ಪಿ.ಎಂ.ಪ್ರಸನ್ನ ಅವರ ಸದಸ್ಯತ್ವ ಕಾನೂನು ಬದ್ಧವಾಗಿ ಇಲಾಖೆಯಿಂದಲೇ ವಜಾಗೊಂಡಿದೆ. ಈ ಪ್ರಕರಣದಲ್ಲಿ ಜೆಡಿಎಸ್ ಮುಖಂಡರ ಕೈವಾಡ ಇದೆ ಎಂದು ಅವರು ಆರೋಪ ಮಾಡಿರುವುದು ಸತ್ಯಕ್ಕೆ ದೂರ ಎಂದರು. ಮೈಮುಲ್ ನಾಮ ನಿರ್ದೇಶಿತ ಸದಸ್ಯ ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ರಜಮತ್ ಜಾನ್, ಬಾಬು, ಕೆ.ಹೊಲದಪ್ಪ, ಪಿ.ಮಹದೇವ, ಅನಿಲ್ ಕುಮಾರ, ರಘು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net