ಅಂಬೇಡ್ಕರ್​ ವಿಚಾರಧಾರೆಗಳು ಅನುಕರಣೀಯ

Ambedkar's ideologies are exemplary
ವಿಜಯಪುರದ ಖಾಸಗಿ ಹೊಟೇಲ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀನಾಥ ಪೂಜಾರಿ ಮಾತನಾಡಿದರು. ಬಾಲಾಜಿ ಕಾಂಬ್ಳೆ, ಮಹಾದೇವ ಚಲವಾದಿ, ಮತ್ತಿತರರಿದ್ದಾರೆ.
Published on

ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್​ ವತಿಯಿಂದ ಪ್ರಸಕ್ತ ಸಾಲಿನ ಡಾ. ಬಿ.ಆರ್​. ಅಂಬೇಡ್ಕರ್​ ಕುರಿತ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಗೆ ಇಂದಿನಿಂದ ಫೆ. 28 ರವರೆಗೆ ನೋಂದಣಿಗೆ ಅವಕಾಶವಿದ್ದು, ಆಸಕ್ತರು ಭಾಗವಹಿಸಿ ಬಹುಮಾನ ಗೆಲ್ಲಬಹುದು ಎಂದು ದಲಿತ ವಿದ್ಯಾರ್ಥಿ ಪರಿಷತ್​ ಸಂಸ್ಥಾಪಕ ಅಧ್ಯ ಶ್ರೀನಾಥ ಪೂಜಾರಿ ಹೇಳಿದರು.

ಕಳೆದ ಮೂರು ವರ್ಷಗಳಿಂದ ನಮ್ಮ ಸಂಟನೆ ವತಿಯಿಂದ ಅಂಬೇಡ್ಕರ್​ ಅವರ ವಿಚಾರಧಾರೆಗಳು, ಅವರ ವ್ಯಕ್ತಿತ್ವ, ಭಾರತಕ್ಕೆ ಸಂವಿಧಾನ ಸಿದ್ಧಪಡಿಸಲು ಅವರು ಹಾಕಿರುವ ಶ್ರಮ ಹಾಗೂ ಅವರ ಜೀವನದ ಬಗ್ಗೆ ಸಾರ್ವಜನಿಕರಲ್ಲಿ ಇನ್ನು ವಿಶೇಷವಾಗಿ ಯುವ ಜನತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಸ್ಪರ್ಧಾತ್ಮಕ ಪರೀೆಗಳು ಒಟ್ಟು 125 ಅಂಕಗಳ ವಸ್ತು ನಿಷ್ಠ (ಅಬ್ಜೆಕ್ಟಿವ್​) ಮಾದರಿಯಲ್ಲಿ ನಡೆಯುತ್ತದೆ. ಅದರಲ್ಲಿ 100 ಪ್ರಶ್ನೆಗಳು ಕೇವಲ ಅಂಬೇಡ್ಕರ್​ ಅವರಿಗೆ ಸಂಬಂಧಿಸಿದ ಪ್ರಶ್ನೆಗಳಾಗಿದ್ದರೆ, ಇನ್ನುಳಿದ 25 ಪ್ರಶ್ನೆಗಳು ಸಂವಿಧಾನದ ಕುರಿತಾಗಿದ್ದು, ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ 1 ಸರಿ ಅಂಕವನ್ನು ಕಡಿತಗೊಳಿಸಲಾಗುತ್ತದೆ ಎಂದು ವಿವರಿಸಿದರು.

ಈ ವರ್ಷ 6 ಲ ರೂ. ಬಹುಮಾನದ ಮೊತ್ತ ಇರಿಸಲಾಗಿದ್ದು, ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 3 ಲ ರೂ., ದ್ವೀತಿಯ ಸ್ಥಾನಕ್ಕೆ 2 ಲ ರೂ. ಮತ್ತು ತೃತೀಯ ಬಹುಮಾನವಾಗಿ 1 ಲ ರೂ. ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ (ಡಿಡಿಡಿ.ಞಢಛಡಟ.ಟ್ಟಜ) ವೆಬ್​ ಸೈಟ್​ಗೆ ಭೇಟಿ ನೀಡಬಹುದಾಗಿದ್ದು, ಇಲ್ಲವೆ, ಮೊ. 9380678859 ಕ್ಕೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಮುಖಂಡರಾದ ಬಾಲಾಜಿ ಕಾಂಬ್ಳೆ, ಮಹಾದೇವ ಚಲವಾದಿ, ಯಮನಪ್ಪ, ಮಲ್ಲು ಕುಂಬಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net