

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮನುಷ್ಯನ ನಾಲಿಗೆ ಮತ್ತು ಮೆದುಳು ನಡುವಿನ ಸೇತುವೆ ಕುಸಿಯಬಾರದು. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು ಎಂದು ಹೈಕೋರ್ಟ್ ಕಿವಿ ಮಾತು ಹೇಳಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯ ಬಿ.ವೈ. ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್ ಮಾಕನೂರು ಅವರಿಗೆ ಹೈಕೋರ್ಟ್ ಮಾಡಿದ ಪಾಠವಿದು. ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯ ಬಿ.ವೈ. ವಿಜಯೇಂದ್ರ ಮತ್ತು ಪ್ರಶಾಂತ್ ಮಾಕನೂರು ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀತ್ ಅವರು, ಅರ್ಜಿದಾರರ ವಿರುದ್ಧ ನಗರದ ಮಲ್ಲೆಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್ಐಆರ್ಗಳಿಗೆ ಹೈಕೋರ್ಟ್ ತಡೆಯಾಜ್ಷೆ ನೀಡಿದೆ. ಜೊತೆಗೆ ಪ್ರತಿವಾದಿಯಾಗಿರುವ ಮಲ್ಲೆಶ್ವರ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಇದಕ್ಕೂ ಮುನ್ನ ಪ್ರಕರಣದಲ್ಲಿ ಬಿಜೆಪಿ ರಾಜ್ಯಟಕದ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಜ್ಯದ ಸಿಎಂ ಮತ್ತು ಡಿಸಿಎಂ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಬಳಸಿರುವ ಭಾಷೆಯ ಕುರಿತು ಅರ್ಜಿದಾರರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ರಾಜ್ಯದ ಸಿಎಂ, ಡಿಸಿಎಂ ಮತ್ತು ಸಚಿವರ ವಿರುದ್ಧ ದುರ್ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು. ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಹಾಗೂ ಸಂಯಮ ಇರಬೇಕು. ಚುನಾವಣೆ ವೇಳೆ ಜನರಿಗೆ ಜ್ವರ ಬಂದಿರುತ್ತದೆ. ಅಂತಹ ಸಂದರ್ಭದಲ್ಲಿ ಏನೋನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ನಾಲಿಗೆ ಮತ್ತು ಮೆದುಳಿನ ನಡುವಿನ ಸೇತುವೆ ಕುಸಿಯಬಾರದು ಎಂದು ಸಲಹೆ ನೀಡಿದರು.
ರಾಮಾಯಣ,ವಾಜಪೇಯಿ ಸ್ಮರಣೆ:
ಇಂದಿರಾ ಜವಾಬ್ದೋ ಎಂಬ ಪುಸ್ತಕವನ್ನು ಬರೆಯಲಾಗಿತ್ತು. ಅದಕ್ಕೆ ಮುನ್ನಡಿ ಬರೆಯಲು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಕೋರಲಾಗಿತ್ತು. ಅದಕ್ಕೆ ಒಪ್ಪಿದ್ದ ಅವರು, ಇಂದಿರಾ ಅಲ್ಲ, ಇಂದಿರಾ ಜೀ ಜವಾಬ್ದೋ ಎಂಬುದಾಗಿ ಬದಲಿಸಬೇಕು ಎಂದು ಷರತ್ತು ವಿಧಿಸಿದ್ದರು. ಸುಗ್ರೀವ ಹಾಗೂ ಆತನ ಸೈನ್ಯವು ಮರೆಯಲ್ಲಿ ನಿಂತು, ಸೀತೆಯನ್ನು ಹುಡುಕುತ್ತಾ ಬಂದ ರಾಮ&ಲ್ಮಣ ಅವರನ್ನು ಮಾತನಾಡಿಸಲು ಹನುಮಂತನನ್ನು ಕಳುಹಿಸಿದ ಪ್ರಸಂಗ ರಾಮಾಯಣದಲ್ಲಿ ಬರುತ್ತದೆ. ಮೊದಲಿಗೆ ಹನುಮಂತನನ್ನು ನೋಡಿದ್ದ ಲ್ಮಣ, ಆತ ರಾಸನೇ ಇರಬೇಕು ಎಂದು ಭಾವಿಸಿದ್ದ. ಹುನುಮಂತನ ಸೌಜನ್ಯಯುತ ಮಾತು ಕೇಳಿದ ನಂತರ ಆತ ರಾಸನಾಗಿರಲು ಸಾಧ್ಯವೇ ಇಲ್ಲ ನಿರ್ಧರಿಸಿದ್ದ. ಹಾಗಾಗಿ, ಮಾತನಾಡುವಾಗ ಗೌರವದ ಭಾಷೆ ಬಳಸಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಅಲ್ಲದೆ, ವಿರೋಧ ಪದವರು ಎಂದರೆ ಶತ್ರುಗಳಲ್ಲ. ಈಗ ಅವರ ಪ ಅಧಿಕಾರದಲ್ಲಿ ಇರಬಹುದು. ಮುಂದಿನ ಬಾರಿ ಮತ್ತೊಂದು ಪದವರು ಅಧಿಕಾರಕ್ಕೆ ಬರಬಹುದು. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ವಿಶೇಷವಾಗಿ ಟ್ವೀಟ್ಗಳು ಸ್ವೀಟ್ ಆಗಿರಬೇಕು ಹೊರತು ಅಸಿಡಿಟಿಯಿಂದ ಕೂಡಿರಬಾರದು. ದುರ್ಭಾಷೆ ಬಳಸಿದರೆ ನಾಗರಿಕತೆಯ ಮೌಲ್ಯಗಳು ಏನಾಗಬೇಕು? ಶತೃಗಳನ್ನೂ ಗೌರವದಿಂದ ಕಾಣುವ ದೇಶ ನಮ್ಮದು ಎನ್ನುವುದನ್ನು ಯಾರೂ ಮರೆಯಬಾರದು ಎಂದು ನ್ಯಾಯಮೂರ್ತಿ ಬುದ್ಧಿಮಾತು ಹೇಳಿದರು.