ವೈಚಾರಿಕ ಅಕ್ಷರ ಬಿತ್ತಿ ಬೆಳೆದ ಕಲಬುರ್ಗಿ

mahamane
ಗುಳೇದಗುಡ್ಡದಲ್ಲಿ ಬಸವೇಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು.
Published on

ಗುಳೇದಗುಡ್ಡ: ಡಾ.ಎಂ.ಎಂ. ಕಲಬುರ್ಗಿ ಅವರು ನಾಡಿನ ವೈಚಾರಿಕ ಶಿಖರವಾಗಿದ್ದರು. ವಿದ್ಯಾರ್ಥಿಗಳಲ್ಲಿ ವೈಚಾರಿಕ ಅಕ್ಷರಗಳನ್ನು ಬಿತ್ತಿ ಬೆಳೆದವರು. ಕನ್ನಡ ಹಾಗೂ ಬಸವಣ್ಣನವರನ್ನು ಅಪ್ಪಿಕೊಂಡಿದ್ದ ಅವರು ಅಪ್ರತಿಮ ಸಂಶೋಧಕರಾಗಿದ್ದರು ಎಂದು ಸ್ಥಳೀಯ ಭಂಡಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಬಸವಕೇಂದ್ರದ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲೆ ಸಾಹಿತ್ಯ, ಸಂಸ್ಕೃತಿ, ಗ್ರಂಥ ಸಂಪಾದನೆ, ಶಾಸ್ತ್ರ, ಸಾಹಿತ್ಯ, ಹಳೆಗನ್ನಡ, ಜಾನಪದ ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ದುಡಿದರು. ಹಾಗೆಯೇ ಆಯಾ ಕ್ಷೇತ್ರಗಳಲ್ಲಿ ಹಲವು ವಿದ್ಯಾರ್ಥಿ, ವಿಧ್ವಾಂಸರನ್ನು ಬೆಳೆಸಿದರು ಎಂದು ತಿಳಿಸಿದರು.

ಪ್ರೊ. ಮಹದೇವಯ್ಯ ನೀಲಕಂಠಮಠ, ನಿವೃತ್ತ ಪ್ರಾಚಾರ್ಯ ಸಿದ್ಧಲಿಂಗಪ್ಪ ಬರಗುಂಡಿ, ಮುರುಗೇಶ ಶೇಖಾ, ಪ್ರೊ. ಸಾಲಿಮಠ, ಯಲ್ಲಪ್ಪ ಮನ್ನಿಕಟ್ಟಿ, ರಾಚಣ್ಣ ಕೆರೂರ, ಸುರೇಶ ರಾಜನಾಳ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಜಗನ್ನಾಥಸಾ ಮಲಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net