ವಚನಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ

basavkalyan-1
ಬಸವಕಲ್ಯಾಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ಕಾರ್ಯಕ್ರಮದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಸುಗುಣಾ ತಾಯಿ, ಇಂದುಮತಿ ತಾಯಿ, ಆಕಾಶ ಮೊಳಕೇರೆ, ಗುರುನಾಥ ಗಡ್ಡೆ, ವಿಶ್ವನಾಥಪ್ಪ ಬಿರಾದಾರ್ ಇದ್ದರು.
Published on

ಬಸವಕಲ್ಯಾಣ: ಮನುಷ್ಯನ ಜೀವನ ಸುಖಿ ಮತ್ತು ಸಮೃದ್ಧಿ ಆಗಬೇಕಾದರೆ ವಚನಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ತ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಸವಣ್ಣನವರ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ಮಾತನಾಡಿ, ವಚನಗಳು ನಮಗೆ ಪ್ರಾಣ ಜೀವಾಳವಾಗಬೇಕು ಎಂದು ತಿಳಿಸಿದರು.

ವಚನಗಳಲ್ಲಿ ವ್ಯಕ್ತಿ ಮತ್ತು ಸಮಾಜದ ಕಲ್ಯಾಣ ಮೌಲ್ಯಗಳು ಅಡಗಿವೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ವಚನಗಳನ್ನು ಅರಿತುಕೊಂಡರೆ ಅವರ ವ್ಯಕ್ತಿತ್ವ ವಿಕಾಸವಾಗುತ್ತದೆ. ವಚನ ಮಾರ್ಗದಲ್ಲಿ ನಡೆದರೆ ಜೀವನ ಪರಿಪೂರ್ಣವಾಗುತ್ತದೆ. ವಚನಗಳು ಕೇವಲ ಪಠಿಸಿದರೆ ಸಾಲದು. ಅವುಗಳ ಸಂದೇಶದಂತೆ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಉದ್ಘಾಟಿಸಿದ ಆಕಾಶ ಮೋಳಕೆರೆ ಮಾತನಾಡಿ, ಶರಣರ ಶಿವಯೋಗ ಮಾರ್ಗ, ದಾಸೋಹ ಸಂಸ್ಕೃತಿ ಹಾಗೂ ವಚನ ಪರಂಪರೆ ಜಗತ್ತಿಗೆ ಶ್ರೇಷ್ಠ ಕೊಡುಗೆಯಾಗಿವೆ ಎಂದು ಹೇಳಿದರು.

ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಸುಗುಣಾ ತಾಯಿ, ಇಂದುಮತಿ ತಾಯಿ, ಸತ್ಯಕ್ಕ ತಾಯಿ, ಬಸವ ದೇವರು, ಪ್ರಕಾಶ ದೇವರು, ಗಂಗಾಧರ ದೇವರು ಸಮ್ಮುಖ ವಹಿಸಿದ್ದರು. ಪ್ರಮುಖರಾದ ಗುರುನಾಥ ಗಡ್ಡೆ, ವಿಶ್ವನಾಥಪ್ಪ ಬಿರಾದಾರ್, ಭಂಡಾರಿ, ಗುಂಡಪ್ಪ ಸಂಗಮಕರ್, ಮಹಾದೇವಪ್ಪ ಇಜಾರೆ, ಸೋನಾಲಿ ನೀಲಕಂಠೆ, ಶಿವರಾಜ ನೀಲಕಂಠೆ ಇತರರಿದ್ದರು. ಬಾಬು ಬೆಲ್ದಾಳ ಸ್ವಾಗತಿಸಿ, ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net