

ಚಿಕ್ಕಮಗಳೂರು: ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದ ಪ್ರಸಿದ್ಧ ವಚನಕಾರರಾಗಿದ್ದು, ಅವರ ವಚನಗಳಲ್ಲಿ ಅರಿವು, ಕಾಯಕ, ದಾಸೋಹ, ನಡೆ-ನುಡಿ, ಸತ್ಯ ಎಂಬ ಸಾಮಾಜಿಕ ಮೌಲ್ಯಗಳನ್ನು ನೀಡಿದ್ದಾರೆ. ಅಂತಹ ಮೌಲ್ಯಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ತಿಪ್ಪೆರುದ್ರಪ್ಪ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮಾಡೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಪ್ಪಳ್ಳಿ ಚಿಕ್ಕಮಗಳೂರು ಸಹಯೋಗದಲ್ಲಿ ಮುಗುಳವಳ್ಳಿ ನಂಜಪ್ಪಶೆಟ್ಟಿ ಸ್ಮಾರಕ ಜಿಲ್ಲಾ ಮಟ್ಟದ ವಚನ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ೧೨ನೇ ಶತಮಾನದಲ್ಲಿ ಬೇರೆ ಬೇರೆ ಜನಾಂಗದವರನ್ನು ಸೇರಿಸಿ ಚಿಂತನ-ಮAಥನ ನಡೆಸಿದರು. ಅಂದಿನ ಅನುಭವ ಮಂಟಪ ಇಂದಿನ ಸಂಸತ್ತಿನAತೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹೇಳಿದರು.
ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಸಂದರ್ಭೋಚಿತ ಎಂಬAತೆ ಸಂವಿಧಾನ ಮತ್ತು ವಚನ ಸೌರಭ ಕಾರ್ಯಕ್ರಮವನ್ನು ಒಟ್ಟಿಗೆ ನಡೆಸುತ್ತಿರುವುದು ಸಂತಸ ತಂದಿದೆ. ಭಾರತವನ್ನು ಜಗತ್ತಿನ ಸುಭದ್ರ ರಾಷ್ಟçವನ್ನಾಗಿ ಮಾಡಲು ಸಂವಿಧಾನ ಸಹಕರಿಸುತ್ತದೆ. ವಚನಕಾರರು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು, ಉಳ್ಳವರಿಗೆ ಮಾತ್ರ ರಾಷ್ಟçವಲ್ಲ ಎಂಬುದನ್ನು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಬಸವಣ್ಣನವರು ಬಂಡವಾಳಶಾಯಿ ವ್ಯವಸ್ಥೆಯನ್ನು ರೂಡಿಸಿಕೊಳ್ಳುವುದನ್ನು ವಿರೋಧಿಸಿದರು. ಆರ್ಥಿಕ ವ್ಯತ್ಯಾಸಗಳನ್ನು ಸರಿಪಡಿಸುವ ಆಶಯವನ್ನು ಹೊಂದಿದ್ದರು ಎಂದು ತಿಳಿಸಿದರು.
ಇಡೀ ಜೀವಕುಲ ಅಭಿವ್ಯಕ್ತ ಸ್ವಾತಂತ್ರö್ಯವನ್ನು ದುರುಪಯೋಗಿಸಿಕೊಳ್ಳಬಾರದು. ಮತ್ತೊಬ್ಬರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು. ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂಬುದು ಬಸವಣ್ಣನವರ ಆಶಯವಾಗಿತ್ತು. ೮೦೦ ವರ್ಷಗಳ ಹಿಂದೆ ಅಭಿವ್ಯಕ್ತಿ ಸ್ವಾತಂತ್ರö್ಯವನ್ನು ಕೊಟ್ಟಂತಹ ಏಕೈಕ ವ್ಯಕ್ತಿ ಎಂದರೆ ಅದು ಬಸವಣ್ಣನವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಸ್ಥಾಪಕ ಮತ್ತು ಪ್ರಾಚಾರ್ಯ ಎಂ.ಎನ್.ಷಡಕ್ಷರಿ ಮಾತನಾಡಿ, ಕರ್ತವ್ಯಕ್ಕೂ ಕಾಯಕಕ್ಕೂ ಬಹಳ ವ್ಯತ್ಯಾಸವಿದೆ. ಜ್ಞಾನವನ್ನು ಹಂಚಿಕೊಳ್ಳುವ ಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಇಂದಿನ ಕಾರ್ಯಕ್ರಮವು ಸಾರ್ವಜನಿಕವಾಗಿ ಜ್ಞಾನವನ್ನು ಬಿತ್ತರಿಸುವುದಾಗಿದೆ. ಪ್ರಪಂಚವೇ ಒಂದು ತೆರೆದ ಶಾಲೆ ಇದ್ದಂತೆ. ಕಲಿಕೆ ನಿರಂತರವಾಗಿ ಆಗಬೇಕು. ಹೊಟ್ಟೆಕಿಚ್ಚು ಎನ್ನುವುದು ತಾನು ವಿಷ ಸೇವಿಸಿ ಇನ್ನೊಬ್ಬರು ಸಾಯಲಿ ಎಂದು ಬಯಸಿದಂತೆ ಎಂದು ಹೇಳಿದರು.
ಇದೇ ವೇಳೇ ಶಾಲೆಯ ಮುಖ್ಯ ಶಿಕ್ಷಕ ಯೋಗೀಶ್ ಸಂವಿಧಾನ ಪೀಠಿಕೆ ಬೋಧಿಸಿದರು. ಶಾಲೆಯ ಸಂಸ್ಥಾಪಕಿ ವಿಶಾಲಾ ಷಡಾಕ್ಷರಿ, ಪ್ರಮುಖರಾದ ರವೀಶ್ ಕ್ಯಾತನಬೀಡು, ಸುಮಾ ಪ್ರಸಾದ್, ನಟರಾಜ್ ಎಸ್ ಕೊಪ್ಪಲು, ನೀಲಕಂಠಾಚಾರ್ಯ ಮತ್ತಿತರರಿದ್ದರು.