

ಯಾದಗಿರಿ: ವಚನ ಪಿತಾಮಹಾ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ವಚನ ಸಂಗ್ರಹಕ್ಕಾಗಿ ತಮ್ಮ ಬದುಕು ಮೀಸಲಿಟ್ಟ ಧಿಮಂತ ಎಂದು ಹಿರಿಯ ಸಾಹಿತಿ ಸಿ.ಎಂ.ಪಟ್ಟೇದಾರ್ ಹೇಳಿದರು.
ನಗರದ ಲಿಂಗೇರಿ ಕೋನಪ್ಪ ಕಾಲೇಜನಲ್ಲಿ ಜಿ¯್ಲÁಡಳಿತ, ಜಿ¯್ಲÁ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಫ.ಗು.ಹಳಕಟ್ಟಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಫ.ಗು. ಹಳಕಟ್ಟಿ ಜಯಂತಿ ಮಾತನಾಡಿದ ಅವರು, ತಮ್ಮ ಸರ್ವಸ್ವವನ್ನೂ ವಚನ ಸಾಹಿತ್ಯ ಸಂಶೋಧನೆ, ಶೈP್ಷÀಣಿಕ, ಸಹಕಾರ ಮತ್ತು ಕೃಷಿ ಇತರೆ ಕ್ಷೇತ್ರಗಳ ಏಳಿಗೆಗಾಗಿ ಧಾರೆ ಎರೆದ ಮಹಾದಾನಿಯಾಗಿದ್ದಾರೆ ಎಂದರು.
ವಚನ ಸಾಹಿತ್ಯ, ರಗಳೆಗಳು, ಅಂಕಣ ಬರಹಗಳು ಇಂತಹ ಅಮೂಲ್ಯ ನೂರಕ್ಕೂ ಹೆಚ್ಚು ಗ್ರಂಥಗಳನ್ನು ಹಳಕಟ್ಟಿ ಅವರು ರಚಿಸಿ ಪ್ರಕಟಿಸಿದ್ದಾರೆ. ತಮ್ಮ ಆಪ್ತರೊಬ್ಬರ ಮನೆಯಲ್ಲಿ ಬಟ್ಟೆಯ ಮೂಟೆಗಳಲ್ಲಿ ಬಿಗಿದು ಜೋಡಿಸಿಟ್ಟಿದ್ದ ವಚನ ಸಾಹಿತ್ಯವುಳ್ಳ ಓಲೆಯ ಗರಿಗಳನ್ನು ತಂದು ಪ್ರಕಟಿಸಿ ಅವುಗಳಿಗೆ ಮರುಜೀವ ಕೊಟ್ಟು ಇಂದು ವಚನ ಸಾಹಿತ್ಯ ಓದುವಂತೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಮುದ್ನಾಳ್ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಶ್ರೀನಿವಾಸ ಕರ್ಲಿ ಮಾತನಾಡಿ, ವಚನ ಸಾಹಿತ್ಯದ ಜೀವಂತಿಕೆಗೆ ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ. ತಾವು ಕೈಗೆತ್ತಿಕೊಂಡ ಮುದ್ರಣಕಾರ್ಯ ಮತ್ತು ಅವರೇ ನಡೆಸುತ್ತಿದ್ದ ಎರಡು ಪತ್ರಿಕೆಗಳ ನಿರ್ವಹಣೆ ತುಂಬ ಕಠಿಣವಾದಾಗ ಸ್ವಂತ ವಾಸಿಸಲು ಇದ್ದ ಮನೆ ಮಾರಿ ತಮ್ಮ ಯೋಜನೆಗಳನ್ನು ಅನುಷ್ಠಾನ ಮಾಡಿದ ಮಹಾನ್ ಸಾಧಕರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಅಯ್ಯಣ ಹುಂಡೇಕಾರ್, ಲಿಂಗೇರಿ ಕೋನಪ್ಪ ಪ್ರೌಢಶಾಲೆ ಪ್ರಾಚಾರ್ಯ ಗುರಪ್ಪ ವಿಶ್ವಕರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉತ್ತರಾದೇವಿ ಮಠಪತಿ ಇತರರಿದ್ದರು.