ವಚನಗಳ ಭಾವಾರ್ಥ ತಿಳಿದುಕೊಳ್ಳಿ

22 sirigeri 01 may photo
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.38472223, 0.31699753);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
Published on

ಸಿರಿಗೇರಿ: ವಚನಕಾರ ಬಸವಣ್ಣ ಜಗತ್ತಿಗೆ ಸಮಾನತೆಯನ್ನು ಸಾರಿದರು. 12 ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅನೇಕ ಸಮಸ್ಯೆ ಹಾಗೂ ವಿಷಯಗಳನ್ನು ಚರ್ಚಿಸಲು ಅವಕಾಶ ಕಲ್ಪಿಸಿದ್ದರು ಎಂದು ಅಖಿಲ ಭಾರತದ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ ಸೋಮಶೇಖರ್ ಹೇಳಿದರು.

ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಅನ್ನಪೂರ್ಣ ಪ್ರಕಾಶನ ಸಂಸ್ಥೆಯಿಂದ ಆಯೋಜಿಸಿದ್ದ ಅನುಭವ ಮಂಟಪ ಒಂದು ಚಿಂತನೆ ಮತ್ತು ವಚನಗಾಯನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಬದುಕಿನ ಸರಳತೆಯನ್ನು ಬಸವಣ್ಣ ತಿಳಿಸಿದ್ದಾರೆ. ಸಮಾನತೆಯ ಹರಿಕಾರರಾಗಿ ಅಸ್ಪಶ್ಯತೆ ಹೋಗಲಾಡಿಸಲು ಶ್ರಮಿಸಿದರು. ವಚನಗಳನ್ನು ಪಠಿಸುವುದರೊಂದಿಗೆ ಅವುಗಳನ್ನು ಹಾಡುತ್ತಾ ಭಾವಾರ್ಥ ತಿಳಿದುಕೊಳ್ಳಬೇಕು ಎಂದು ತಿಳಿಸಿದರು. 25 ಕ್ಕೂ ಹೆಚ್ಚು ವಚನಗಳನ್ನು ಹೇಳಿ ಅವುಗಳ ಭಾವಾರ್ಥ ತಿಳಿಸಿದರು.

ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಯರಿಸ್ವಾಮಿ ಮಾತನಾಡಿ, ಡಾ.ಸಿ ಸೋಮಶೇಖರ್ ಅವರು ತುಮಕೂರಿನ ಜಿಲ್ಲಾಧಿಕಾರಿಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ, ಗಡಿ ಪ್ರದೇಶಾಭಿವೃದ್ಧಿ ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬಸವಣ್ಣ ಅವರ ವಚನಗಳ ಬಗ್ಗೆ ಪಾಂಡಿತ್ಯ ಹೊಂದಿದ್ದಾರೆ ಎಂದರು.

ಗವಾಯಿ ದೊಡ್ಡಬಸವ ಮತ್ತು ತಂಡದಿಂದ ವಚನಗಾಯನ ಕಾರ್ಯಕ್ರಮ ನಡೆಯಿತು. ಶಂಭುಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹೂಗಾರ ಬಸವರಾಜ್, ಮುಖ್ಯಶಿಕ್ಷಕರಾದ ಎನ್.ಪಂಪಾಪತಿ, ಎಚ್.ಎಂ ಶಶಿಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net