ವಚನ ಸಾಹಿತ್ಯದಲ್ಲಿದೆ ಜೀವನ ಮಾರ್ಗ

04 blk 05
Published on

ಭಾಲ್ಕಿ: ಸುಂದರ ಬದುಕು ಕಟ್ಟಿಕೊಳ್ಳಲು ಅಗತ್ಯ ಸಿದ್ಧ ಸೂತ್ರಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ ಎಂದು ಬೀದರ್ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.
ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ ಶರಣ ಸಾಹಿತ್ಯ ಪರಿಷತ್ ಹಾಗೂ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ವಚನ ಶ್ರಾವಣ ಸಪ್ತಾಹದಲ್ಲಿ ಮಾತನಾಡಿ, ಸತ್ಯಶುದ್ಧ ಕಾಯಕದೊಂದಿಗೆ ಸರಳ ಜೀವನ ನಡೆಸಿದ ಶರಣರ ಬದುಕು ಅನುಕರಣೀಯ ಎಂದು ತಿಳಿಸಿದರು.
ಪತ್ರಕರ್ತ ಸೋಮನಾಥ ಮುದ್ದಾ ಉಪನ್ಯಾಸ ನೀಡಿ, ನಿರಾಕಾರ ಸ್ವರೂಪ ದೇವರನ್ನು ಕಾಡು, ಗುಡ್ಡ, ನದಿ, ಸಾಗರದೆ ಎಲ್ಲೆಡೆ ಹುಡುಕುವ ಬದಲು ನಮ್ಮ ಅಂತರಂಗದಲ್ಲಿ ಅನುಭವಿಸಬೇಕು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಸಂತೋಷ ಹಡಪದ ಪ್ರಾಸ್ತಾವಿಕ ಮಾತನಾಡಿದರು. ಆಡಳಿತಾಧಿಕಾರಿ ವೀರಣ್ಣ ಪರಸಣ್ಣೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಸುಶ್ಮಿತಾ ಸ್ವಾಗತಿಸಿದರು. ಮಲ್ಲಿಕಾರ್ಜುನ ರಂಜೋಳಕರ ನಿರೂಪಣೆ ಮಾಡಿದರು. ಕನ್ಯಾಕುಮಾರಿ ಯಾಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net