ವಚನ ಸಾಹಿತ್ಯದಲ್ಲಿ ಹಳಕಟ್ಟಿ ಪಾತ್ರ ಪ್ರಮುಖ

Anubhav mantap
ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿದ್ದ ಫ.ಗು.ಹಳಕಟ್ಟಿ ಜಯಂತ್ಯುತ್ಸವದಲ್ಲಿ ಶ್ರೀ ಶಿವಾನಂದ ಸ್ವಾಮಿ ಮಾತನಾಡಿದರು. ಶ್ರೀ ಬಸವ ದೇವರು, ಅನೀಲ ಮಹಾರಾಜ, ಸುಗುಣಾತಾಯಿ, ಡಾ.ದಿಲೀಪ್ ಸಿಂಧೆ ಇತರರಿದ್ದರು.
Published on

ಬಸವಕಲ್ಯಾಣ: ಕನ್ನಡ ಸಾಹಿತ್ಯ ಲೋಕದಲ್ಲಿ ವಚನ ಸಾಹಿತ್ಯದ ಸಂಶೋಧನೆ, ಪ್ರಕಟಣೆ ಮತ್ತು ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಫ.ಗು. ಹಳಕಟ್ಟಿ. ಅವರು ವಚನ ಸಾಹಿತ್ಯ ಪಿತಾಮಹವೆಂದು ಖ್ಯಾತರಾಗಿದ್ದಾರೆ ಎಂದು ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮಿ ಹೇಳಿದರು.

ವಿಶ್ವಬಸವಧರ್ಮ ಟ್ರಸ್ಟ್,ಅನುಭವ ಮಂಟಪ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಫ.ಗು, ಹಳಕಟ್ಟಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರು ಪರಿಚಯವಾಗಲು ಹಳಕಟ್ಟಿಯವರ ತಮ್ಮ ಸುದೀರ್ಘ ೩೬ ವರ್ಷಗಳನ್ನು ಗಂಧದ ಕೊರಡಿನಂತೆ ಸವಿಸಿದರು ಎಂದರು.

ಪೂಜ್ಯ ಬಸವ ದೇವರು ಮಾತನಾಡಿ, ಫ.ಗು ಹಳಕಟ್ಟಿವರು. ವೃತಿಪರ ಜೀವನಕ್ಕಾಗಿ ವಿಜಯಪುರಕ್ಕೆ ಆಗಮಿಸಿ ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸಿ ಹತ್ತು ಹಲವು ಬಗೆಯಲಿ ಸಮಾಜ ಸೇವೆ ಮಾಡಿದರು. ಅವರ ಸಹೋದರ ಮಾವನವರಿಂದ ವಚನ ತಾಡೋಲೆಗಳ ಕುರಿತು ಹಳಕಟ್ಟಿ ಅವರು ತಿಳಿದುಕೊಂಡರು. ಅದು ಅವರ ಬದುಕಿನ ಪರಿವರ್ತನೆಯ ಘಟ್ಟ. ಅಲ್ಲಿಂದ ಮನೆ, ಮಠಗಳಲ್ಲಿ ಗುಪ್ತವಾಗಿದ್ದ ವಚನ ತಾಡೋಲೆಗಳ ಸಂಗ್ರಹ, ಅಧ್ಯಯನ, ಪ್ರಕಟಣೆ ಕಾರ್ಯ ಮಾಡಿದರು. ಹಿತಚಿಂತಕ ಪ್ರಿಂಟಿಂಗ್ ಪ್ರೆಸ್ ಪ್ರಾರಂಭಿಸಲು ತಮ್ಮ ಸ್ವಂತ ಮನೆ ಮಾರಬೇಕಾಯಿತು. ಮಗ ಮೃತಪಟ್ಟ ಸಂದರ್ಭದಲ್ಲಿ ಸಹ ವಿಚಲಿತರಾಗದೆ ವಚನಗಳ ಕಾರ್ಯದಲ್ಲಿ ಮಗ್ನರಾಗಿದ್ದು ಹಳಕಟ್ಟಿ ವಿಶೇಷತೆ ಎಂದು ಹೇಳಿದರು.

ಪೂಜ್ಯ ಸುಗುಣಾತಾಯಿ, ಶ್ರೀ ಅನೀಲ ಮಹಾರಾಜರು ಕಲಖೋರಾ ಸಾನ್ನಿಧ್ಯ, ಡಾ.ದಿಲೀಪ್ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣರಾವ ಹಂದಿಕೆರೆ, ನಾಗಶೆಟ್ಟಿ ಪಾಟೀಲ್ ಇತರರಿದ್ದರು. ಅಶೋಕ ಕುಂಬಾರ ನಿರೂಪಣೆ ಮಾಡಿದರು. ಸುಮಂಗಲಾ ಕುಂಬಾರ ಸ್ವಾಗತಿಸಿದರು. ಹಾಲಮ್ಮ ಪಾಟೀಲ್ ವಚನ ಗಾಯನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net