ವಚನ ಸಾಹಿತ್ಯದ ಅರಿವು ಅಗತ್ಯ

CTD MURUGA--00006
Published on

ಚಿತ್ರದುರ್ಗ: ಮಕ್ಕಳು,ವಯಸ್ಕರೆನ್ನದೇ ಎಲ್ಲರಿಗೂ ವಚನ ಸಾಹಿತ್ಯದ ಅರಿವಿನ ಅಗತ್ಯವಿದೆ ಎಂದು ರಾಷ್ಟ್ರೀಯ ಬಸವಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪ್ರತಿಪಾದಿಸಿದರು.
ನಗರದ ಮುರುಘಾಮಠದಲ್ಲಿ ಗುರುವಾರ ವಚನ ಕಮ್ಮಟ ಪುಸ್ತಕ ಪರಿಷ್ಕರಣೆ ಸಮಿತಿ ಸಭೆಯಲ್ಲಿ ಮಾತನಾಡಿದ ಅ ವರು,ಅಪರೂಪ ಎನ್ನುವ ಪ್ರಖರ ವೈಚಾರಿಕ ವಚನ ಸಾಹಿತ್ಯ ಎಲ್ಲರ ಮನೆ-ಮನ ತಲುಪಲು ಬಸವಪರ ಸಂಘಟನೆಗಳು ಶ್ರಮಿಸ ಬೇಕಿದೆ.
ಯಾವ ಭೇದ ಎಣಿಸದೆ ಬಸವಣ್ಣನ ಕೆಲಸ ಮಾಡಬೇಕಿದೆ. ಸಾಮಾಜಿಕ ಜಾಲತಾಣಗಳನ್ನು ಈ ಸಾಹಿತ್ಯ ಪ್ರಚಾರಕ್ಕೆ ಬಳಸಿಕೊಳ್ಳ ಬೇಕಾ ಗಿದೆ.ಕರ್ನಾಟಕ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅದರ ನಿಜ ಅರ್ಥವನ್ನು ಬಸವಾಭಿಮಾನಿಗಳು ಬಸ ವಸಂಘಟನೆಗಳು,ಮಠಾಧೀಶರು, ಸಾರ್ವಜನಿಕರು ಎಲ್ಲರೂ ಸೇರಿ ವಿಶ್ವಮಾನ್ಯಗೊಳಿಸಬೇಕಾಗಿದೆ.
ಅನೇಕ ಮಠಗಳು ಬಸವತತ್ವ,ಶರಣ ಸಂಸ್ಕೃತಿ ಪ್ರಚಾರಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ. ಇದು ವ್ಯಾಪಕವಾಗಿ ನಡೆಯಬೇಕಿದೆ. ವ ಚನ ಸಾಹಿತ್ಯಕ್ಕೆ ತಮ್ಮ ಇಡೀ ಬದುಕನ್ನು ಮೀಸಲಿಟ್ಟ ಫ.ಗು ಹಳಕಟ್ಟಿ ಅವರ ಬದುಕು ಬರಹ ಸಾಧನೆ ಎಲ್ಲ ತರಗತಿ ಪಠ್ಯಗಳಲ್ಲಿ ವಿದ್ಯಾರ್ಥಿ ಗಳಿಗೆ ಲಭ್ಯವಾಗಬೇಕು. ಸರ್ಕಾರದ ಮಟ್ಟದಲ್ಲೂ ಇಂತಹ ಪರೀಕ್ಷೆಗಳಾಗ ಬೇಕೆಂದರು.
ಗದಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರ್‌ವಸ್ತ್ರದ ಮಾತನಾಡಿ,ವಚನ ಸಾಹಿತ್ಯ ಎಲ್ಲ ಬಗೆಯ ವಿದ್ಯಾರ್ಥಿಗಳನ್ನು ತಲುಪಲು ಸಹಕಾರಿಯಾಗುವಂತಹ ಪಠ್ಯಕ್ರಮ ರೂಪಿಸಬೇಕು. ವಿಜ್ಞಾನ ವಿದ್ಯಾರ್ಥಿಗಳಿಗೂ ವಚನ ಸಾಹಿತ್ಯದ ತಿಳಿವಳಿಕೆಗೆ ಪ್ರೇರೇಪಿಸಬೇಕೆಂದರು. ಹಿರಿಯ ಸಂಶೋಧಕ ಡಾ. ಬಿ .ರಾಜಶೇಖರಪ್ಪ ಮಾತನಾಡಿ,ಪರಿಷ್ಕರಣೆಗೆ ಇನ್ನಷ್ಟು ಪೂರ್ವ ತಯಾರಿಯ ಅಗತ್ಯವಿದೆ ಎಂದರು.
ಗದಗ-ಗುಳೇದಗುಡ್ಡ ಬಸವ ಕೇಂದ್ರದ ಅಶೋಕ್‌ಬರಗುಂಡಿ ಅವರು ಮಾತನಾಡಿ,ಎಲ್‌ಕೆಜಿ-ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಮೌಖಿಕ ವಚನಗಳ ಕಂಠಪಾಠ ಇರ ಬೇಕೆಂದರು. ಶಿಗ್ಗಾವಿ ಕುನ್ನೂರು ಕಾಲೇಜು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, 28 ವರ್ಷಗಳ ಹಿಂದೆ ಚಿತ್ರದುರ್ಗ ಮುರುಘಾಮಠದಿಂದ ಆರಂಭಗೊಂಡ ವಚನ ಕಮಟ್ಟ ಪರೀಕ್ಷಾರ್ಥಿಗಳ ಸಂಖ್ಯೆ ಲಕ್ಷ ದಾಟಿದೆ ಎಂದ ರು.
ಶಿಗ್ಗಾವಿ ಉಪನ್ಯಾಸಕ ಎಸ್.ವಿ. ಕುಲಕರ್ಣಿ, ಡಾ.ಯಶೋಧಾ ರಾಜಶೇಖರಪ್ಪ, ಶಂಕರ್ ಬೇವಿನಗಿಡ, ಚಂದ್ರಶೇಖರ್ ಬಿ.ನಾಗರಹಾಳ, ತಾಳೀಕೋಟೆ ಶಿವಶಂಕರ್ ಅಕ್ಕಿ, ಬಸವರಾಜ ಕಟ್ಟಿ, ಎಂ.ಜಿ.ರುದ್ರಮೂರ್ತಿ, ಡಾ.ಸಿ.ಟಿ.ಜಯಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net