ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡಗೆ ಅಪಾರ

02-07kodekal02
Published on

ಕೊಡೇಕಲ್: ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರವಾಗಿದೆ ಎಂದು ಪ್ರಾಚಾರ್ಯ ಸೋಮಶೇಖರ ಪಂಜಗಲ್ ಹೇಳಿದರು.

ಗ್ರಾಮದ ಜನಕ ಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಪಿತಾಮಹಾ ಎಂದು ಕರೆಸಿಕೊಂಡಿರುವ ಫ.ಗು.ಹಳಕಟ್ಟಿ ಅವರು ಕೇವಲ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದವರಲ್ಲ ಅವರು ವಿಶೇಷವಾಗಿ ಶರಣ ಪರಂಪರೆಗೆ ಹೋಸ ಆಯಾಮ ನೀಡಿದ್ದಾರೆ ಎಂದರು.

ಹಳಕಟ್ಟಿ ಅವರು ಶ್ರಮಿಸದಿದ್ದರೆ ಇಂದಿಗೂ ಅನೇಕ ಅಮೂಲ್ಯ ವಚನಗಳು ಬೆಳಕಿಗೆ ಬರುತ್ತಿರಲಿಲ್ಲ. ಅವರು ವಚನಗಳನ್ನು ಕೇವಲ ಓದುವ ವಸ್ತುಗಳನ್ನಾಗಿ ನೋಡಲಿಲ್ಲ. ಬದಲಿಗೆ ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಪೂರಕವಾದ ಸಾಧನಗಳನ್ನಾಗಿ ಬಳಸಿದರು ಅವರ ಈ ಸಂಶೋಧನಾ ಕರ‍್ಯವು ಹಲವು ಸಂಶೋಧಕರಿಗೆ ದಾರಿ ದೀಪವಾಗಿದೆ ಎಂದರು

ಇದಕ್ಕೂ ಪೂರ್ವ ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು, ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನಾಗರಾಜ ಪಾಟೀಲ, ಶಶಿಕುಮಾರ ಪತ್ತಾರ, ಸಂಗೀತಾ ದೋರಿ, ಸುಜಾತಾ ವಂಗಿ, ಕಾವೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net