ವಚನ ಸಾಹಿತ್ಯ ಸಂಶೋಧನೆಗೆ ಕಲಬುರ್ಗಿ ಶ್ರಮ ಹೆಚ್ಚು

04-09-Shiva-3
ರಾಯಚೂರಿನ ಬಸವಕೇಂದ್ರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಎಂ.ಎಂ.ಕಲಬುರ್ಗಿ ಪುಣ್ಯಸ್ಮರಣೆ ಹಾಗೂ ನೂಲಿ ಚಂದಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಪದಾಕಾರಿಗಳಾದ ವಿಜಯಕುಮಾರ ಸಜ್ಜನ್, ಚನ್ನಬಸವಣ್ಣ ಮಹಾಜನಶೆಟ್ಟಿ, ಮಹಾದೇವಪ್ಪ ಏಗನೂರು, ಬಸವರಾಜ ಇದ್ದರು.
Published on

ರಾಯಚೂರು: ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಶೋಧನೆಗೆ ಡಾ.ಎಂ.ಎಂ.ಕಲಬುರ್ಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದು, ಅವರು ತಿಳಿಸಿಕೊಟ್ಟ ಶರಣ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಹೇಳಿದರು.
ಸ್ಥಳೀಯ ಬಸವ ಕೇಂದ್ರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಎಂ.ಎಂ.ಕಲಬುರ್ಗಿ ಪುಣ್ಯಸ್ಮರಣೆ ಹಾಗೂ ಶರಣ ನೂಲಿ ಚಂದಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣ ಸಾಹಿತ್ಯದ ಕುರಿತ ಸತ್ಯ ಮತ್ತು ನೇರ ನುಡಿಯ ಕಾರಣಕ್ಕಾಗಿ ಕಲಬುರ್ಗಿ ಹುತಾತ್ಮರಾಗಿದ್ದಾರೆ ಎಂದರು.
ಶಿವಕುಮಾರ ಮಾಟೂರ ಮಾತನಾಡಿ, ಕಲಬುರ್ಗಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆಗಾಗಿ ಬದುಕಿದ್ದರು. ಶರಣ ಸಮಾಜದ ಶುದ್ದೀಕರಣ, ಏಕೀಕರಣ, ನವೀಕರಣ, ಜಾಗತೀಕರಣ ಮತ್ತು ಸಬಲೀಕರಣದ ಮಹತ್ವದ ಆಲೋಚನೆಗಳನ್ನು ಹೊಂದಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಮಾತನಾಡಿ, ಕಲಬುರ್ಗಿ ಶರಣ ಸಾಹಿತ್ಯದ ಬೆಳವಣಿಗೆ ಹಾಗೂ ಸಮಾಜ ಪರಿವರ್ತನೆಯ ಕಟು ಸತ್ಯವನ್ನು ಹೇಳಿದ್ದಕ್ಕಾಗಿ ಮತಾಂಧರು ಅವರನ್ನು ಹತ್ಯೆ ಮಾಡಿದ್ದು ಘೋರ ದುರಂತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವಕೇಂದ್ರದ ಪದಾಕಾರಿಗಳಾದ ವಿಜಯಕುಮಾರ ಸಜ್ಜನ್, ಚನ್ನಬಸವಣ್ಣ ಮಹಾಜನಶೆಟ್ಟಿ, ಮಹಾದೇವಪ್ಪ ಏಗನೂರು, ಸುಮಂಗಲ ಹಿರೇಮಠ, ದಾನಮ್ಮ ಸುಭಾಶ್ಚಂದ್ರ, ಬಸವರಾಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net