ವಚನ ಸಾಹಿತ್ಯ ಮನೆಮನ ಬೆಳಗಲಿ

Let the Vachana literature illuminate the mind
Let the Vachana literature illuminate the mind
Published on

ಇಳಕಲ್ಲ (ಗ್ರಾ): ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಮನೆ ಮನೆಗಳಲ್ಲಿ ಮೊಳಗಲಿ, ಬೆಳಗಲಿ ಎಂದು ನೀಲಮ್ಮ ಬಾದಿಮನಾಳ ಹೇಳಿದರು.

ಇಲ್ಲಿನ ಯುಕೆಪಿ ಉದ್ಯಾನವನದಲ್ಲಿ ಮಂಗಳವಾರ ಆಯೋಜಿಸಿದ್ದ ಮನೆ ಮನೆಗಳಲ್ಲಿ ವಚನ ಸೌರಭ ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಅವರು, ಶರಣರ ಒಂದೊಂದು ವಚನಗಳು ಒಂದೊಂದು ಜೀವನದ ಪಾಠಗಳನ್ನು ಕಲಿಸುತ್ತವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಭವ್ಯವಾಗುತ್ತದೆ ಎಂದರು.

ಗುರುಮಹಾಂತ ಶ್ರೀಗಳು ಮತ್ತು ಶಿರೂರ ನಿಸರ್ಗ ಕೇಂದ್ರದ ಸಂಚಾಲಕ ಡಾ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ನಿವೃತ್ತ ಪ್ರಾಚಾರ್ಯೆ ಶಶಿಕಲಾ ಮಠ, ಎನ್.ಎಸ್. ಹಾದಿಮನಿ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷೆ ಸವಿತಾ ಗೊಂಗಡಶೆಟ್ಟಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಸಂಗಣ್ಣ ಗದ್ದಿ ಅವರನ್ನು ಸತ್ಕರಿಸಲಾಯಿತು.

ಕದಳಿ ವೇದಿಕೆ ಅಧ್ಯಕ್ಷೆ ಸುಜಾತ ಅಂಗಡಿ, ಅಕ್ಕನ ಬಳಗದ ಸುವರ್ಣ ಗೊಂಗಡಶೆಟ್ಟಿ, ಸುನೀತಾ ಅಂಗಡಿ, ಮಹಾಂತೇಶ ವಾಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net