ವಚನ ಸಾಹಿತ್ಯ ಪಿತಾಮಹಾ ಫಗು ಹಳಕಟ್ಟಿ

2gkl1
Published on

ಗುರುಮಠಕಲ್: ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ವಚನ ಸಾಹಿತ್ಯ ಸಂಗ್ರಹಣೆ, ಸಂಶೋಧನೆ, ಮುದ್ರಣ ಕಾರ್ಯಕ್ಕೆ ಮುಂದಾಗದೇ ಹೋಗಿದ್ದರೆ ಜಗತ್ತಿಗೆ ಅಪರೂಪದ ಮೌಲ್ಯಗಳಿರುವ ವಚನ ಸಾಹಿತ್ಯ ಸಂಪತ್ತು ಪರಿಚಯವಾಗುತ್ತಿರಲಿಲ್ಲ. ಇದಕ್ಕಾಗಿ ಅವರನ್ನು ವಚನ ಸಾಹಿತ್ಯದ ಪಿತಾಮಹಾ ಎಂದು ಕರೆಯಲಾಗುತ್ತದೆ ಎಂದು ಪುರಸಭೆ ಸಹಾಯಕ ಅಧಿಕಾರಿ ವೀರಭದ್ರಪ್ಪ ಹೇಳಿದರು.

ಇಲ್ಲಿನ ಪುರಭೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಫ.ಗು.ಹಳಕಟ್ಟಿ ಜಯಂತಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಂತ ಮುದ್ರಣಾಲಯದಲ್ಲಿ ವಚನಗಳನ್ನು ಅಚ್ಚು ಹಾಕಿ, ತಮ್ಮದೇ ಸಂಪಾದಕತ್ವದ ಶಿವಾನುಭವ, ನವಕರ್ನಾಟಕ ನಿಯತ ಕಾಲಿಕೆಗಳ ಮೂಲಕ ವಚನಗಳು ಜಗತ್ತಿಗೆ ಸಾರಿ ವಚನಗಳ ಜ್ಞಾನವನ್ನು ಪಸರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಸಮಗ್ರ ವಚನ ಸಾಹಿತ್ಯ ಸಂಪುಟ ಹೊರತರಲು ಹಳಕಟ್ಟಿಯವರು ೫೦ ವರ್ಷ ಅವಿರತ ಶ್ರಮಿಸಿದ್ದರು. ಒಂದು ಸಂಘ-ಸAಸ್ಥೆ ಮಾಡಬಹುದಾದ ಕೆಲಸ ಹಳಕಟ್ಟಿ ಅವರು ಏಕಾಂಗಿಯಾಗಿ ಮಾಡಿದ್ದಾರೆ. ವಚನ ಸಾಹಿತ್ಯ ಇರುವವರೆಗೆ ಹಳಕಟ್ಟಿಯವರ ಹೆಸರು ಅಜರಾಮರವಾಗಿರುತ್ತದೆ ಎಂದು ಹೇಳಿದರು.

ಈ ವೇಳೆ ಪುರಸಭೆ ನಾಮನಿರ್ದೇಶಕ ಸದಸ್ಯ ವೆಂಕಟರಾಮುಲು ನೀರೆಟಿ, ಸಿಬ್ಬಂದಿ ಹಿರಿಯ ಆರೋಗ್ಯ ನಿರೀಕ್ಷಕ ರಾಮುಲು ಗೌಡ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾದ ನೀಲಮ್ಮ, ಮಲ್ಲಮ್ಮ, ಅಶೋಕ ಗೌಡ, ವಿನೋದ ಕುಮಾರ, ಶ್ರೀನಿವಾಸ, ನರಸಿಮುಲು, ರಾಕೇಶ ದಡಂಗೆ, ಬಾಬಾ, ಎಂಡಿ ಇಸ್ಮಾಯಿಲ್, ಮಲ್ಲಯ್ಯ, ರೀಯಾಜ್ ಅಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net