ವಚನ ಸಾಹಿತ್ಯ ಜ್ಞಾನ ಭಂಡಾರ

12 HULSUR 01
Published on

ಹುಲಸೂರು: ಸಾಹಿತ್ಯ ಕ್ಷೇತ್ರದಲ್ಲಿ ವಚನ ಸಾಹಿತ್ಯ ಜ್ಞಾನದ ಭಂಡಾರವಾಗಿದೆ. ಜೀವನ ಸುಧಾರಣೆಗೆ, ಶರಣರ ಒಂದು ವಚನ ಸಾಕು ಎಂದು ಜಾನಪದ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ ಖಪಲೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ೪೪ನೇ ವಚನ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ತ ವಚನ ಸ್ಪರ್ಧೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ವಚನಗಳು ವಿಶ್ವಾದ್ಯಂತ ಮಾನ್ಯತೆ ಪಡೆದ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿವೆ. ಶರಣರ ವಿಚಾರಗಳ ಜತೆ ಸಮಾಜದ ಸಮಾನತೆ ಸ್ವಾತಂತ್ರ್ಯ ಮನೋಭಾವ ಮೂಡಿಸುವ ದಾರಿ ದೀಪಗಳಾಗಿವೆ ಎಂದರು.

ಮುಖ್ಯಗುರು ಸೂರ್ಯಕಾಂತ ಪಾಟೀಲ್ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶರಣರ ವಿಚಾರ ತಿಳಿಯಲು ಉತ್ತಮ ವೇದಿಕೆ ಎಂದರು.
ಶಿವಲಿಂಗಯ್ಯ ಕನ್ನಾಡೆ, ಮಲ್ಲಮ್ಮ ಪಾಟೀಲ್, ಬಸವಕುಮಾರ ಕೌಟೆ, ಸೂರ್ಯಕಾಂತ ಅಡಕೆ, ದೇವಿಂದ್ರ ನಂಜವಾಡೆ, ಪದ್ಮಿಣಿ ಸಾಳೆ, ಬಂಡಪ್ಪ ಮಂಗಾ ಇತರರಿದ್ದರು. ರಾಜಕುಮಾರ ತೊಂಡಾರೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net