ವಚನ ಸಾಹಿತ್ಯ ಕನ್ನಡದ ಅನರ್ಘ್ಯ ರತ್ನ

TKE kanna
ಅಜ್ಜಂಪುರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉಪನ್ಯಾಸಕ ಡಾ. ಜಿ.ವಿ.ಮಂಜುನಾಥ್ ಉದ್ಘಾಟಿಸಿದರು. ಎ.ಸಿ.ಚಂದ್ರಪ್ಪ, ಕೆ.ರಾಜಣ್ಣ, ಎಚ್.ಆರ್.ಚಂದ್ರಪ್ಪ, ಡಿ.ಪಿ.ರಾಜಪ್ಪ, ಓಂಕಾರಮ್ಮ ಇತರರಿದ್ದರು.
Published on

ತರೀಕೆರೆ: ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಅನರ್ಘ್ಯ ರತ್ನ ಎಂದು ಉಪನ್ಯಾಸಕ ಡಾ. ಜಿ.ವಿ.ಮಂಜುನಾಥ್ ಹೇಳಿದರು.

ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ದೇವರರೊಡನೆ ಸಂಸ್ಕೃತ ಭಾಷೆ ಮಾತ್ರ ಮಾತನಾಡುತ್ತದೆ ಎನ್ನುವ ಕಾಲದಲ್ಲಿ ಕನ್ನಡವೂ ಮಾತನಾಡುತ್ತದೆ ಎಂಬುದನ್ನು ತೋರಿಸಿದವರು 12ನೇ ಶತಮಾನದ ಬಸವಾದಿ ಶರಣರು. ಪ್ರಾಚೀನ ಭಾರತದಲ್ಲಿ ವರ್ಣಾಶ್ರಮ ಪದ್ಧತಿ ಸಮಯದಲ್ಲಿ ಬಲಿ ಧರ್ಮದ ಮೂಲ ಎನ್ನುವ ಪದ್ಧತಿ ಜಾರಿಯಲ್ಲಿತ್ತು. ಇದಕ್ಕೆ ಬದಲಾಗಿ ದಯೆ ಧರ್ಮದ ಮೂಲ ಎಂದು ಹೇಳಿದವರು ವಿಶ್ವಗುರು ಬಸವಣ್ಣನವರು ಎಂದರು.

ಬಸವಾದಿ ಶರಣರು ಕಾಯಕ ಪ್ರಜ್ಞೆ ಜಾಗೃತಗೊಳಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರಾದರೂ, ಇಂಥ ಅಪರೂಪದ ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿದ ನಾಡಿನಲ್ಲೇ ಪರಕೀಯರ ಹಾವಳಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಚಾರ್ಯ ಕೆ.ರಾಜಣ್ಣ, ಸಾಂಸ್ಕೃತಿಕ ಚಿಂತಕ ಎ.ಸಿ.ಚಂದ್ರಪ್ಪ, ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜಪ್ಪ, ಕದಳಿ ವೇದಿಕೆ ಅಧ್ಯಕ್ಷೆ ಓಂಕಾರಮ್ಮ, ಡಾ. ನಟರಾಜ್, ತಿಪ್ಪೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net