ವಚನ ವಿಜಯೋತ್ಸವ ಸರಳ ಆಚರಣೆ

akka-2
Published on

ಬೀದರ್: ಲಿಂಗಾಯತ ಮಹಾಮಠ, ಬಸವ ಸೇವಾ ಪ್ರತಿಷ್ಠಾನದಿಂದ ನಗರದ ಬಸವಗಿರಿಯಲ್ಲಿ ಪ್ರಸಕ್ತ ವರ್ಷದ ವಚನ ವಿಜಯೋತ್ಸವವನು ಸರಳವಾಗಿ ಫೆ.25ರಿಂದ 27 ರವರೆಗೆ ಆಚರಿಸಲು ನಿರ್ಧರಿಸಲಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣ ಹಾಗೂ ಡಾ. ಗಂಗಾಂಬಿಕೆ ಅಕ್ಕ ಅವರ ನೇತೃತ್ವದಲ್ಲಿ ಮೂರು ದಿನ ಧಾರ್ಮಿಕ ವಿಧಿ-ವಿಧಾನದ ಕಾರ್ಯಕ್ರಮಗಳು ನಡೆಯಲಿವೆ.

ನಗರದಲ್ಲಿನ ಮೆರವಣಿಗೆ ರದ್ದುಪಡಿಸಲಾಗಿದೆ. ಸಾರ್ವಜನಿಕರು ಸಹಕರಿಸಿ, ತಮ್ಮ ಮನೆಗಳಲ್ಲಿ ಮೂರು ದಿನಗಳ ಕಾಲ ವಚನ ವಿಜಯೋತ್ಸವದ ಧಾರ್ಮಿಕ ಆಚರಣೆ (ಇಷ್ಟಲಿಂಗ ಯೋಗ, ಸಮಗ್ರ ಗುರುವಚನ ಪಾರಾಯಣ, ಧರ್ಮಗ್ರಂಥಕ್ಕೆ ಗೌರವಾರ್ಪಣೆ ಇತ್ಯಾದಿ)ಗಳನ್ನು ಭಕ್ತಿಯಿಂದ ಆಚರಿಸಬೇಕು ಎಂದು ಸಂಯೋಜಕ ರಮೇಶ ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net