ವಚನ ಚಳವಳಿಯಿಂದ ಕನ್ನಡದ ಸಂಸ್ಕೃತಿ ಸಮೃದ್ಧ

CTD BOOK...
Published on

ಚಿತ್ರದುರ್ಗ: ವಚನ ಚಳವಳಿ ಕೊಡುಗೆಯಿಂದ ಕನ್ನಡದ ಸಂಸ್ಕೃತಿ ಸಮೃದ್ಧವಾಗಿದೆ ಎಂದು ವಿಶ್ರಾಂತ ಪ್ರಾಚಾರ‌್ಯ ಪ್ರೊ.ಜಿ.ಪರಮೇಶ್ವರಪ್ಪ ಹೇಳಿ ದ ರು. ಪುಣ್ಯಕೋಟಿ ಪ್ರಕಾಶನ ಮತ್ತು ಕ್ಯಾತಲಿಂಗೇಶ್ವರ ವಕ್ಕಲು ಬಳಗದಿಂದ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾ ನುವಾರ ಏರ್ಪಡಿಸಿದ್ದ ಪಿ.ಬಸವರಾಜಪ್ಪ ಅವರ ಅನುಭವ ಚಿಂತಾಮಣಿ ವಚನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ,ಶರಣರ ಜೀವನಾನುಭವ ಗಳೇ ವಚನ ಚಳವಳಿ. ವಚನಗಳ ಜೀವಪರ,ನಿಸರ್ಗ ಹಾಗೂ ಪ್ರಗತಿಪರ ಧೋರಣೆ ಕೃತಿಯಲ್ಲಿ ಸಮರ್ಥವಾಗಿ ಅನಾವರಣಗೊಂಡಿದೆ ಎಂ ದರು.

ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ಈ ಕೃತಿ ವಚನ ಪರಂಪರೆಯ ಮುಂದುವರಿಕೆ ಎಂದರು.ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ದೊ ಡ್ಡಮಲ್ಲಯ್ಯ ಕೃತಿ ಕುರಿತು ಮಾತನಾಡಿದರು. ನಿವೃತ್ತ ಲೆಕ್ಕಾಧಿಕಾರಿ ಬಿ.ನಾಗರಾಜ್ ಮತ್ತಿತರರು ಇದ್ದರು. ಭಾರತಿ ರುದ್ರಸ್ವಾಮಿ ಪ್ರಾರ್ಥಿಸಿದ ರು. ಶಿಕ್ಷಕ ಬೆಳೆಗೆರಪ್ಪ ಸ್ವಾಗತಿಸಿ,ಬಸವರಾಜಪ್ಪ ವಂದಿಸಿದರು. ಶಿಕ್ಷಕ ರುದ್ರಸ್ವಾಮಿ ಹರ್ತಿಕೋಟೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net