ವಚನ ಕಮ್ಮಟ ಪರೀಕ್ಷೆ ರ‌್ಯಾಂಕ್ ವಿಜೇತರಿಗೆ ಬಹುಮಾನ

CTD VACHANA BAHU8MANA-...
Published on

ಚಿತ್ರದುರ್ಗ: ಶ್ರೀ ಮುರುಘಾಮಠ ಬಸವತತ್ವ ಮಹಾವಿದ್ಯಾಲಯ 1998ರಿಂದ ನಿರಂತರ 26 ವರ್ಷಗಳಿಂದ ವಚನ ಕಮ್ಮಟ ಪರೀಕ್ಷೆ ಆಯೋಜಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೆಗ್ಗುಂದ ಶ್ರೀ ವನಕಲ್ ಮಲ್ಲೇಶ್ವರಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು. ಅನುಭವ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ವಚನ ಕಮ್ಮಟ ಪರೀಕ್ಷೆ ರ‌್ಯಾಂಕ್ ವಿಜೇತರಿಗೆ ಬಹುಮಾನ ವಿತರಣೆ ಕಾರ‌್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,ಬಸವತತ್ವ ಮಹಾವಿದ್ಯಾಲಯ ಹಾಗೂ ವಚನ ಕಮ್ಮಟ ಪರೀಕ್ಷೆ ಶ್ರೀ ಮಠದ ಎರಡು ಕಣ್ಣುಗಳಿದ್ದಂತೆ. ವಚನ ಸಾಹಿತ್ಯ ಈ ನಾಡಿನ ಕಾವ್ಯಾತ್ಮಕ ಸಂವಿಧಾನವೆಂದು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ತಿಳಿಸಿದ್ದರು ಎಂದರು.
ಹಿರೇಮಾಗಡಿ ಶ್ರೀ ವಿರಕ್ತ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ,ಮಕ್ಕಳಿಗೆ ತ್ರಿಕರಣ ಶುದ್ಧಿ,ಸಂಸ್ಕಾರಯುತ ಶಿಕ್ಷಣ ನೀಡಬೇಕಿದೆ ಎಂದರು. ಖಜೂರಿಯ ಶ್ರೀ ಮುರುಘರಾಜೇಂದ್ರ ವಿರಕ್ತಮಠದ ಶ್ರೀ ಮುರುಘೇಂದ್ರ ಕೋರುಣ್ಯೇಶ್ವರ ಸ್ವಾಮೀಜಿ ಮಾತ ನಾಡಿ ವಚನ ಎಂದರೆ ಮಾತು,ನುಡಿದಂತೆ ನಡೆ,ವಚನಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಅನುಷ್ಠಾನಗೊಳಿಸಿಕೊಂಡರೆ ಪೋಲೀಸ್ ಠಾ ಣೆಗಳ ಅಗತ್ಯ ಬೀಳುವುದಿಲ್ಲವೆಂದು ಅಭಿಪ್ರಾಯಪಟ್ಟರು.
ವಚನ ಕಮ್ಮಟ ಪರೀಕ್ಷೆ ನಿವೃತ್ತ ನಿರ್ದೇಶಕ ಪ್ರೊ.ಚಂದ್ರಪ್ಪರನ್ನು ಸನ್ಮಾನಿಸಲಾಯಿತು.ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಉಪಸ್ಥಿತರಿದ್ದರು. ಶಿಲ್ಪಾ ಸ್ವಾಗತಿಸಿ,ನೇತ್ರಾವತಿ ನಿರೂಪಿಸಿದರು. ಮಂಗಳಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net