

ಕಲಬುರಗಿ: ಮೂಢನಂಬಿಕೆ ವಿರುದ್ಧ ಹೋರಾಡಿದ ಬಸವಣ್ಣನವರು ಲೋಕಪೂಜ್ಯರು. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ಹೇಳಿದರು.
ಶ್ರೀ ಸದ್ಗುರು ಕಲಾ ಸಂಸ್ಥೆಯಿAದ ಶಿವಾಜಿ ನಗರದ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಚನ ಸಂಗೀತೋತ್ಸವದಲ್ಲಿ ಮಾತನಾಡಿ, ಅನುಭವ ಮಂಟಪದ ಮೂಲಕ ಜನರಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವನೆ ಮೂಡಿಸಿದ ಮಹಾತ್ಮರು. ಅಂಥ ಮಹಾತ್ಮರ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಕೋಡ್ಲಾ ಮಾತನಾಡಿ, ಬಸವಾದಿ ಶರಣರು ಬದುಕಿ, ಬೋಧಿಸಿದ ವಿಚಾರಗಳು ವಾಸ್ತ, ಸರಳ, ಸಹಜವಾಗಿವೆ. ವಚನ ವಿಚಾರಗಳು ಆಚರಣೆಯಾಗದೆ ಅನುಸರಣೆ ಆಗಬೇಕು ಎಂದರು.
ಉದಯಕುಮಾರ ಸಾಲಿ, ರಾಜಕುಮಾರ ಕೋಟಿ, ಡಾ. ಶಿವರಂಜನ ಸತ್ಯಂಪೇಟೆ, ಸಿದ್ಧರಾಮ ಯಳವಂತಗಿ, ಶಿವಶರಣಪ್ಪ ದೇಗಾಂವ, ಚಂದ್ರಕಾAತ ಎಂ. ಗುಳಗಿ ಅವರಿಗೆ ಸದ್ಗುರು ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದತ್ತರಾಜ ಕಲಶೆಟ್ಟಿ, ರಾಚಯ್ಯ ಸ್ವಾಮಿ ರಟಕಲ್, ಬಸಯ್ಯ ಗುತ್ತೇದಾರ, ಭೀಮಾಶಂಕರ ಹೂಗಾರ, ಜಗದೀಶ ದೇಸಾಯಿ ಕಲ್ಲೂರ, ಭಗವಂತರಾವ ಕಣ್ಣೂರ, ಮೌನೇಶ ವಿಶ್ವಕರ್ಮ, ಸೂರ್ಯಕಾಂತ ಗೊಬ್ಬೂರವಾಡಿ ಇತರ ಕಲಾವಿದರಿಂದ ವಚನ ಸಂಗೀತೋತ್ಸವ ನಡೆಯಿತು.
ಮಹಾಂತೇಶ ಕುಂಬಾರ ಬಸವಣ್ಣನವರ ಕುರಿತು ಅನುಭಾವ ನೀಡಿದರು. ಬಸವಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶಿವಾನಂದ ಬಿಲಗುಂದಿ, ಕಲ್ಯಾಣಕುಮಾರ ಸಗರ ಇತರರಿದ್ದರು. ಲೀಲಾವತಿ ಚಂದ್ರಕಾAತ ಗೋಗಿ ನಿರೂಪಣೆ ಮಾಡಿದರು. ಶಿವಲಿಂಗ ಕೆಂಗನಾಳ ಸ್ವಾಗತಿಸಿದರು. ತೇಜು ಎಸ್ವಿ. ನಾಗೋಜಿ ಪ್ರಾರ್ಥನೆಗೀತೆ ಹಾಡಿದರು. ವಿಜಯಲಕ್ಷಿö್ಮÃ ಕೆಂಗನಾಳ ವಂದಿಸಿದರು.