

ಯಾದಗಿರಿ: ಶರಣರ ವಚನಗಳು ನಿಶಬ್ಧ ಸಂವೇದನೆ ಹೊಂದಿವೆ. ಬುದ್ದಿಗೆ ಸಾಧ್ಯವಾಗದ್ದು ಭಾವಕ್ಕೆ ಸಾಧ್ಯವಾಗುತ್ತದೆ. ವಚನ ಸಾಹಿತ್ಯ ಅರಿತವ ಜಗತ್ತನ್ನು ಅರಿಯಬಲ್ಲ ಎಂದು ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಗುರು ಮುರುಘಾರಾಜೇಂದ್ರ ಸ್ವಾಮಿಗಳು ನುಡಿದರು.
ಮಂಗಳವಾರ ನಗರದ ಕಸಾಪ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸುತ್ತೂರು ಜಗದ್ಗುರು ಡಾ.ಶ್ರೀರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಜರುಗಿದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಎಲ್ಲ ತತ್ವ, ಸಿದ್ಧಾಂತಗಳು ಕರ್ಮದ ಬಗೆಗೆ ಹೇಳುತ್ತವೆ. ಆದರೆ, ಬಸವಾದಿ ಶರಣರ ವಚನಗಳು ಬದುಕಿನಲ್ಲಿ ಹತಾಶರಾದವರಿಗೆ ಪ್ರೇರಣೆ ನೀಡುತ್ತವೆ ಎಂದರು. ಶರಣರ ವಚನಗಳು ನಮಗೆ ದಾರಿ ದೀಪವಾಗಿವೆ. ಅವರ ಮಾರ್ಗದಲ್ಲಿ ನಡೆದಲ್ಲಿ ನಾವು ಬದುಕನ್ನು ಸುಲಭವಾಗಿ ಅಥರ್ೈಸಿಕೊಳ್ಳಬಹುದಾಗಿದೆ ಎಂದರು.
ಕತ್ತಲಲ್ಲಿದ್ದವರಿಗೆ ಬೆಳಕಿನೆಡೆಗೆ ಒಯ್ಯುವ ಸಾಮಥ್ರ್ಯ ಶರಣರ ವಚನಗಳಿಗೆ ಇವೆ. ಅಲ್ಲದೆ ಎಲ್ಲರನ್ನೂ ಮನುಷ್ಯತ್ವದಿಂದ ನೋಡುವಂತೆ ಮಾಡಿವೆ. ಶರಣರು ತಮ್ಮ ಬದುಕಿನಲ್ಲಿ ಅನೇಕ ಸಂಕಷ್ಟ ಎದುರಿಸಿ ವಚನಗಳನ್ನು ರಚಿಸಿದ್ದಾರೆ. ಅವುಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ವಚನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಕನ್ನಡ ಪ್ರಾಧ್ಯಾಪಕ ಡಾ.ನರಸಪ್ಪ ಚಿತ್ತಾಪುರ ವಿಶೇಷ ಉಪನ್ಯಾಸ ನೀಡಿ, 12ನೇ ಶತಮಾನ ಸುವರ್ಣಯುಗವಾಗಿತ್ತು. ಶರಣರು ಸುಲಲಿತವಾಗಿ ಎಲ್ಲರಿಗೂ ಅರ್ಥವಾಗುವಂತೆ ಆಡು ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಹಾದಿ ತಪ್ಪಿದ್ದ ಸಮಾಜಕ್ಕೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ. ವಚನಕ್ರಾಂತಿಯ ಮೂಲಕ ನಾಗರಿಕ ಸಮಾಜ ತಿದ್ದಿದ್ದಾರೆ. ಮೌಢ್ಯ, ಕಂದಾಚಾರಗಳನ್ನು ಹೋಗಲಾಡಿಸಲು ಸಾಕಷ್ಟು ಪ್ರಯತ್ನಪಟ್ಟು ಯಶಸ್ವಿಯಾಗಿದ್ದಾರೆ. ನಮ್ಮ ಮಕ್ಕಳಿಗೆ ವಚನಗಳ ಮಹತ್ವವನ್ನು ತಿಳಿಸುವುದು ಇಂದಿನ ದಿನಗಳಲ್ಲಿ ಅಗತ್ಯವಿದೆ ಎಂದು ಹೇಳಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಮಾತನಾಡಿ, ಡಾ.ರಾಜೇಂದ್ರ ಸ್ವಾಮಿಗಳ ಜನ್ಮದಿನದದ ನಿಮಿತ್ತ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮ ಆಚರಿಸಲಾಗಿದೆ. ನಾಡಿಗೆ ವಚನ ಸಾಹಿತ್ಯ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ವಚನ ಗಾಯನ ಸ್ಪಧರ್ೆಗಳನ್ನು ಏರ್ಪಡಿಸುವ ಚಿಂತನೆ ಇದೆ ಎಂದರು.
ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕ ಮಾತನಾಡಿದರು. ಶಹಾಪುರ ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಮಲ್ಲಿಕಾಜರ್ುನ ಕರಕಳ್ಳಿ, ಗರುಪ್ಪಾಚಾರ್ಯ ಬಾಡಿಯಾಳ, ಮಹಾದೇವಪ್ಪಗೌಡ ಅಬ್ಬೆತುಮಕೂರು, ಅಯ್ಯಣ್ಣ ಹುಂಡೆಕಾರ, ನೂರೊಂದಪ್ಪ ಲೆವಡಿ, ದೇವು ವರ್ಕನಳ್ಳಿ ಇದ್ದರು.
ಡಾ.ಎಸ್.ಎಸ್.ನಾಯಕ ನಿರೂಪಿಸಿದರು. ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಡಾ.ಭೀಮರಾಯ ಲಿಂಗೇರಿ ವಂದಿಸಿದರು.