ವಕ್ಫ್‌ ಹೆಸರಿನಲ್ಲಿ ಪ್ರಭಾವಿಗಳಿಂದ ಆಸ್ತಿ ಕಬಳಿಕೆ

MLC K.S.Naveen
Published on

ಚಿತ್ರದುರ್ಗ: ಖಾಸಗಿ ಜಮೀನನ್ನು ಮೊದಲು ವಕ್ಫ್‌ ಬೋರ್ಡ್ ವಶಕ್ಕೆ ಪಡೆದು, ನಂತರ ಪ್ರಭಾವಿ ಮುಸಲ್ಮಾನರು ಅಕ್ರಮವಾಗಿ ಆಸ್ತಿ ಮಾಡುತ್ತಿದ್ದಾರೆ. ಇವರ್ಯಾರೂ ಬಡವರ ಪರವಿಲ್ಲ ಎಂದು ಸಚಿವ ಜಮೀರ್ ಹೇಳಿಕೆಗೆ ಬಿಜೆಪಿ ಎಂಎಲ್ಸಿ ಕೆ.ಎಸ್.ನವೀನ್ ತಿರುಗೇಟು ನೀಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್‌ ಹೆಸರಿನಲ್ಲಿ ಆಗುತ್ತಿರುವ ಹಗರಣ ಒಂದೊಂದಾಗಿ ರಾಜ್ಯದಲ್ಲಿ ಬಯಲಿಗೆ ಬರುತ್ತಿದೆ. ಒಂದು ಇಂಚು ಜಾಗ ವಶಕ್ಕೆ ಪಡೆದರೂ ಕೂಡಲೇ ಹಿಂದಿರುಗಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲೂ ಇಂತಹ ಪ್ರಕರಣ ಬೆಳಕಿಗೆ ಬರುತ್ತಿವೆ. ಹೀಗಾಗಿ ರೈತರು ಆತಂಕದಲ್ಲಿದ್ದು, ಬಿಜೆಪಿ ಬೆಂಬಲವಾಗಿ ನಿಲ್ಲಲಿದೆ ಎಂದರು.

ಬಲಶಾಲಿಗಳು ರಾಜ್ಯದಲ್ಲಿ ಸಾವಿರಾರು ಎಕರೆ ಬಡವರ ಜಮೀನು ಕಬಳಿಸಿದ್ದಾರೆ. ಅದೆಲ್ಲವನ್ನು ವಾಪಸ್ ಕೊಡಿಸುವ ಕೆಲಸ ಬಿಜೆಪಿ ಮಾಡಲಿದೆ. ಅದಕ್ಕಾಗಿ ಹೋರಾಟಕ್ಕೂ ಸಿದ್ಧ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net