ವಕ್ಫ್ ಮಂಡಳಿ ವಿರುದ್ಧ ಹೋರಾಟಕ್ಕೆ ವಾನರ ಹಾಜರ್

vanar
Published on

ಕಲಬುರಗಿ: ನಗರದಲ್ಲಿ ವಕ್ಫ್ ಮಂಡಳಿ ಹೆಸರಲ್ಲಿ ರೈತರ ಜಮೀನು ಕಬಳಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ನೇಗಿಲ ಯೋಗಿ ಸ್ವಾಭಿಮಾನ ವೇದಿಕೆಯಿಂದ ಹಮ್ಮಿಕೊಂಡ ವಕ್ಫ್ ಹಟಾವೋ ಅನ್ನದಾತ ಬಚಾವೋ ಪ್ರತಿಭಟನೆಯಲ್ಲಿ ವಾನರ ಪ್ರವೇಶ, ಗಮನ ಸೆಳೆಯಿತು. ಪ್ರತಿಭಟನೆ ಉz್ದೆÃಶಿಸಿ, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಭಾಷಣ ಕೊನೇ ವೇಳೆ ಜೈ ಶ್ರೀರಾಮ ಘೋಷಣೆ ಮೊಳಗಿಸುವ ವೇಳೆ ವಾನರ ವೇದಿಕೆಯ ಮೇಲೆ ಆಗಮಿಸಿತು. ಇದು ಶುಭ ಸೂಚಕ ಎಂದು ಜನರು ಘೋಷಣೆ ಮೊಳಗಿಸಿದರು. ರಾಮ ಮಂದಿರ ತೀರ್ಪು ಬರೆಯುವಾಗ ಮೂರು ದಿನ ನ್ಯಾಯಾಲಯದ ಕಿಟಕಿಯಲ್ಲಿ ವಾನರ ಕುಳಿತ್ತಿದ್ದು, ಇದು ಶುಭ ಸಂಕೇತ. ರೈತರಿಗೆ ಜಯ ನಿಶ್ಚಿತ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net