

ಬಾಗಲಕೋಟೆ: ದೇವರಾಜ ಅರಸು ಕೊಟ್ಟ ಆಸ್ತಿಯನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಲು ದೊಡ್ಡ ಹುನ್ನಾರ ನಡೆಸಿದೆ. ರೈತರ ಆಸ್ತಿಯನ್ನು ವಕ್ಫ್
ಬೋರ್ಡ್ ಮೂಲಕ ಜಾತ್ಯಾತೀತವಾಗಿ ಆಸ್ತಿಯನ್ನು ಲೂಟಿ ಮಾಡಲು ಸರ್ಕಾರ ಹೊರಟಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ಹಳೇಗೌಡರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಉಳವವನೇ ಒಡೆ ಎಂದು ಮಾಡಿದರು ಆದರೆ ಸಿದ್ಧರಾಮಯ್ಯನವರು ದೇವರಾಜ ಅರಸು ಆಗಲು ಹೊರಟಿದ್ದಾರೆ. ಇವರು ೮ ವರ್ಷ ಆಡಳಿತ ನಡೆಸಿದರೂ ಅವರ ತದ್ರೂಪಿ ಆಗಿಲ್ಲ ಎಂದರು.
ಸಚಿವ ಜಮೀರ್ ಅಹ್ಮದ್ ಅಲ್ಲಾನ ಆಸ್ತಿ ರಕ್ಷಣೆ ಮಾಡಬೇಕಾಗಿದೆ ಎನ್ನುತ್ತಾರೆ. ಆದರೆ ಆಳಂದದಲ್ಲಿರುವ ಬೀರದೇವರ ಆಸ್ತಿಯಲ್ಲಿ, ಸಿಂದಗಿ ವಿರಕ್ತಮಠ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರೇ ಉತ್ತರ ಕೊಡಬೇಕಾಗಿದೆ ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಭಯದಿಂದ ತರಾತುರಿಯಲ್ಲಿ ಎಲ್ಲಿ ಆಸ್ತಿ ಕಬಳಿಸಬೇಕೋ ಅಲ್ಲಿ ಆಸ್ತಿಯನ್ನು ಕಬಳಿಸುವ ಪ್ರಯತ್ನವನ್ನು ಸರ್ಕಾರ ವಕ್ಫ್ ಬೋರ್ಡ್ ಮೂಲಕ ನಡೆಯುತ್ತಿದೆ ಎಂದು ಆರೋಪಿಸಿದರು.