

ಹಾಸನ: ರಾಜ್ಯದಲ್ಲಿ ವೈರಸ್‌ನಂತೆ ಹರಡುತ್ತಿರುವ ವಕ್ಫ್ ಬೋರ್ಡ್ ತಕರಾರು ಕೊನೆಗಾಣಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅವರ ಬುಡಕ್ಕೇ ಬರಲಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.
ವಕ್ಫ್ ಮೂಲಕ ಆಸ್ತಿ ಕಬಳಿಸುವ ಕೃತ್ಯ ಎಲ್ಲೆಡೆ ಆಗಿದೆ, ಆಗುತ್ತಿದೆ. ದೇಶವ್ಯಾಪಿ ವಕ್ಫ್ ಬೋರ್ಡ್ ವೈರಸ್ ಹರಡುತ್ತಿದೆ. ಕೇಂದ್ರ ಸರ್ಕಾರ 44 ವಕ್ಫ್ ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದ ಕೂಡಲೇ ಕರ್ನಾಟಕದಲ್ಲಿ ಸಚಿವ ಜಮೀರ್ ಅಹಮದ್ ಅವರು, ಡಿಸಿಗಳಿಗೆ ಆದೇಶ ಮಾಡಿ ಒತ್ತಡ ಹಾಕುವ ಮೂಲಕ ವಕ್ಫ್ ಖಾತೆಗೆ ಜಮೀನು ಮಾಡಿಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರೈತರು ಸೇರಿದಂತೆ ಅನೇಕರ ಮೇಲೆ ಧಮ್ಕಿ ಹಾಕುತ್ತಿರುವುದರ ಬಗ್ಗೆ ಎಲ್ಲರಲ್ಲೂ ಜಾಗೃತಿ ಆಗಿದೆ. ಸಿಎಂ ಅವರು ನೋಟಿಸ್ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ.ಆದರೆ ಇದು ಕಣ್ಣೊರೆಸುವ ತಂತ್ರ, ನಾಟಕ ಅಷ್ಟೆ. ಕೇಂದ್ರ ಸರ್ಕಾರ ಕೂಡಲೇ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು. ನಂತರದಲ್ಲಿ ಆತಂಕ ತಪ್ಪಲಿದೆ ಎಂದರು.
ನಾವೆಲ್ಲರೂ ಕಾನೂನು ತಿದ್ದುಪಡಿ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರದ ಜೊತೆಗೆ ಕೈಜೋಡಿಸಬೇಕು. ನಿರ್ಣಯಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು. ಇಲ್ಲವಾದರೆ ಹಿಂದೂಗಳ ದೇವಾಲಯ, ಸ್ಮಶಾನ, ರೈತರ ಭೂಮಿ ಏನನ್ನೂ ಬಿಡುವುದಿಲ್ಲ. ನಮ್ಮ ರೈತರೂ ಕೂಡ, ಕೂಡಲೇ ತಮ್ಮ ತಮ್ಮ ಪಹಣಿ ಚೆಕ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ವಕ್ಫ್ ಬೋರ್ಡ್ ಸಮಸ್ಯೆ ಗಂಭೀರವಾಗಿದ್ದು, ಇದರ ಹಿಂದೆ ರಾಜ್ಯವನ್ನು ಇಸ್ಲಾಮೀಕರಣ ಮಾಡುವ ಹುನ್ನಾರ ಅಡಗಿದೆ. ಇಷ್ಟಾದರೂ ಕಾಂಗ್ರೆಸ್‌ನವರು ದನಿ ಎತ್ತದೇ ಇದ್ದರೆ, ಎಚ್ಚೆತ್ತುಕೊಳ್ಳದೇ ಹೋದರೆ, ಕಾಂಗ್ರೆಸ್‌ನವರ ಮನೆಯನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕುರ್ಚಿಗಾಗಿ ಕಾಂಗ್ರೆಸ್‌ನವರು ಸೈಲೆಂಟ್ ಆದ್ರೆ ನಿಮಗೇ ತೊಂದರೆ ಆಗಲಿದೆ. ಹಾಗಾಗಿ ವಕ್ಫ್ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿ ಎಂದು ಕೋರಿದರು.ಸುಳ್ಳು ದಾಖಲೆ ಸೃಷ್ಟಿಸಿ ಬಾಬಾ ಬುಡನ್ ಗಿರಿ ತಮ್ಮದು ಎಂದು ಮಾಡಿಕೊಳ್ಳಲು ಹೊರಟಿದ್ದರು. ಆದರೆ ಕಾನೂನು ಹೋರಾಟ, ಆಂದೋಲನ ಸೇರಿದಂತೆ ನಮ್ಮ ನಿರಂತರ ಹೋರಾಟದಿಂದ ನಮಗೆ ಯಶಸ್ಸು ಸಿಕ್ಕಿದೆ. ಮುಸ್ಲಿಂ ಸಮುದಾಯದ ಮಾಂಸಾಹಾರ, ಉರುಸ್ ಸೇರಿದಂತೆ ಎಲ್ಲಾ ಚಟುವಟಿಕೆ ಬಂದ್ ಆಗಿವೆ. ಹಿಂದೂ ಅರ್ಚಕರ ಮೂಲಕ ತ್ರಿಕಾಲ ಪೂಜೆ ನಡೆಯುತ್ತಿವೆ ಎಂದರು.
ಭಾನುವಾರದಿಂದ ಶೋಭಾಯಾತ್ರೆ ಆರಂಭವಾಗಲಿದೆ. ನಂತರ ಧರ್ಮಸಭೆ ನಡೆಯಲಿದ್ದು, 5 ಸಾವಿರ ಮಂದಿ ಭಾಗಿಯಾಗಲಿದ್ದಾರೆ. ಆಂಧ್ರದಲ್ಲಿ ಓವೈಸಿ ವಿರುದ್ಧ ಸ್ಪರ್ಧೆ ಮಾಡಿದ್ದ ಮಾಧವಿ ಲತಾ, ಪ್ರತಾಪ್ ಸಿಂಹ, ಸಿಟಿ ರವಿ ಮೊದಲಾದವರು ಭಾಗಿಯಾಗುವರು ಎಂದರು.
ಹಾಸನ ಡಿಸಿ ಕಚೇರಿಯಲ್ಲಿ ನಕಲಿ ಆಧಾರ್ ಕಾರ್ಡ್ ಮಾಡುವ ಜಾಲ ಬಯಲಾಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಆಗಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯ ವಿವಿಧೆಡೆ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಕ್ರಠಿಣ ಕ್ರಮ ಜರುಬೇಕು ಎಂದು ಆಗ್ರಹಿಸಿದರು. ದೇಶ, ಧರ್ಮ ದ್ರೋಹ ಮಾಡುವ ಒಂದು ದೊಡ್ಡ ಜಾಲವೇ ಇದರ ಮೇಲಿದೆ ಎಂದು ಒತ್ತಾಯಿಸಿದರು. ಮುಂದಿನ ತಿಂಗಳು ಬಾಂಗ್ಲಾ ಹಠಾವೋ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದರು.
ನಮ್ಮ ದೇವರ ಹೆಸರು ಇಟ್ಟುಕೊಂಡು ಅವರು ವ್ಯಾಪಾರ ಮಾಡುತ್ತಿದ್ದಾರೆ. ಕೂಡಲೇ ಇದು ನಿಲ್ಲಬೇಕು. ಸಚಿವ ಜಮೀರ್ ವಿರುದ್ಧ ಕ್ರಮ ಆಗಬೇಕು ಎಂದು ಹರಿಹಾಯ್ದರು. ಸಿಎಂ ಬುಡಕ್ಕೆ ಬರಲಿದೆ ನೆನಪಿಕೊಳ್ಳಿ ಎಂದ ಅವರು,
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಹೇಮಂತ್,ಮಹೇಶ್, ಅರುಣ್, ಮನು, ಅರಣ್ ಇದ್ದರು.