ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಸೀದಿಗಳಲ್ಲಿ ಪ್ರತಿಭಟನೆ

04_HSN_04
Published on

ಹಾಸನ: ಕೇಂದ್ರದ ಜಿಜೆಪಿ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಶುಕ್ರವಾರ ಹಾಸನದ ಎಲ್ಲ ಮಸೀದಿಗಳಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಶಾಂತಿಯುತ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ನಮಾಜ್ ಮುಗಿದ ನಂತರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತಂದಿರುವುದು ಮುಸ್ಲಿಂರನು ದುರ್ಬಲಗೊಳಿಸುವುದಕ್ಕೆ. ವಕ್ಫ್ ಎಂಬುದು ಅಲ್ಲಾಹನಿಗೆ ಸೇರಿದ್ದು, ಮುಸ್ಲಿಮರು ಅದರ ರಕ್ಷಕರು ಎಂದು ಪೋಸ್ಟರ್‌ಗಳನ್ನು ಹಿಡಿದು ಮಸೀದಿ ಮುಂದೆ ಮಾನವ ಸರಪಳಿ ನಿರ್ಮಿಸಿದರು.

ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಮೀರ್ ಖಾನ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮಟ್ಟದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡು ಸುಪ್ರೀಂ ಕೋರ್ಟ್‌ಗೆ ಒಂದು ಮನವಿ ಸಲ್ಲಿಸಲಾಗಿದೆ. ಈ ಪ್ರತಿಭಟನೆಯನ್ನು ಶಾಂತಿಯುತವಾಗಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೆ ವೇಳೆ ಪಾರ್ಲಿನ್ ಮಸೀದಿ ಗುರುಗಳಾದ ಜುಬೀರ್, ಲಾ ಬೋರ್ಡ್ ಕಾರ್ಯದರ್ಶಿ ಸಯ್ಯದ್ ಅಸ್ಲಂ, ನೂರಾನಿ ಮಸೀದಿಯ ಮೌಲ್ವಿ ನಾಸೀರ್, ಹುಸೈನ್, ಫೈರೋಜ್ ಪಾಶ, ಇರ್ಫಾನ್, ಅಶ್ವಕ್, ಬಾಬು, ಶಫಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net