ವಕ್ಫ್ ಕಾಯ್ದೆ ತಿದ್ದುಪಡಿಗೆ ಸಂಸದರ ನಡೆ ಖಂಡನಾರ್ಹ: ಶಾಸಕ ಸಿಮೆಂಟ್ ಮಂಜು ತಿರುಗೇಟು

03_HSN_04 Cament Manju
Published on

ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆ ತಿದ್ದುಪಡಿಯನ್ನು ತಂದಿರುವುದು ಸ್ವಾಗತಾರ್ಹ. ಈ ಕಾಯ್ದೆಯಿಂದ ಬಡ ಮತ್ತು ಹಿಂದುಳಿದ ನೊಂದ ಮುಸ್ಲಿಮರಿಗೆ ಅನುಕೂಲವಾಗಲಿದೆ ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ತಿಳಿಸಿದ್ದಾರೆ.

ಈ ವಿಷಯವಾಗಿ ಗುರುವಾರ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಅವರು, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಇತಿಹಾಸ ಪ್ರಸಿದ್ಧ ಗೌರಿ ಕಟ್ಟೆ, ಬೇಲೂರಿನ ಐತಿಹಾಸಿಕ ಸ್ಥಳಗಳು, ಅರಸೀಕೆರೆ, ಹಾಸನ ಹೀಗೆ ಜಿಲ್ಲೆಯ ಹಲವಾರು ಹಿಂದು ದೇವಾಲಯದ ಸ್ಥಳಗಳನ್ನು ಮತ್ತು ಬಡ ರೈತರ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಿದೆ. ಹಾಸನದ ಸಂಸದರಾದ ಶ್ರೇಯಸ್ ಪಟೇಲ್ ಅವರು ವಕ್ಫ್ ಕಾಯ್ದೆ ಸರಿಯಾಗಿ ತಿಳಿದುಕೊಳ್ಳದೆ ಅವರಿಗೆ ವೋಟು ಹಾಕಿದ ಮುಸಲ್ಮಾನರನ್ನು ಸಂತೋಷಪಡಿಸಲು ವಕ್ಫ್ ಕಾಯ್ದೆ ವಿರುದ್ಧ ಹೇಳಿಕೆಯನ್ನು ನೀಡಿರುತ್ತಾರೆ. ಮಾನ್ಯ ಸಂಸದರಾದ ಶ್ರೇಯಸ್ ಪಟೇಲ್ ಅವರಿಗೆ ಹಿಂದುಗಳು ಮತ ಹಾಕಿದ್ದಾರೆ ಎಂಬುದನ್ನು ಅವರು ಮರೆಯಬಾರದು. ಹಿಂದುಗಳ ದೇವಸ್ಥಾನಗಳು ಬೇಡ, ರೈತರ ಆಸ್ತಿಯನ್ನು ಕಬಳಿಸುವ ವಕ್ಫ್ ಕಾಯ್ದೆ ಬೆಂಬಲಿಸುವ ಸಂಸದರ ನಡೆ ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net